ನವದೆಹಲಿ: ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ಸ್ಥಾನಮಾನ, ಕಾರ್ಯಗಳು ಮತ್ತು ಅಧಿಕಾರಗಳನ್ನು ವ್ಯಾಖ್ಯಾನಿಸಲು ಹೊಸ ಕಾನೂನು ಜಾರಿಗೆ ತರುವ ಅವಶ್ಯಕತೆಯಿದೆ ಎಂದು ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.

ತನಿಖಾ ಸಂಸ್ಥೆಯನ್ನು 1963ರಲ್ಲಿ ಸ್ಥಾಪಿಸಲಾಯಿತು. ಎರಡನೇ ಮಹಾಯುದ್ಧದ ವೇಳೆ ಖರೀದಿ ಮತ್ತು ಸರಬರಾಜುಗಳನ್ನು ಒಳಗೊಂಡ ಲಂಚ ಮತ್ತು ಭ್ರಷ್ಟಾಚಾರದ ಪ್ರಕರಣಗಳ ತನಿಖೆಗಾಗಿ 1941ರಲ್ಲಿ ಸ್ಥಾಪಿಸಲಾದ ವಿಶೇಷ ಪೊಲೀಸ್ ಸಂಸ್ಥೆಯ ಕಾರ್ಯಚಟುವಟಿಕೆ ನಿಯಂತ್ರಿಸಲು ಜಾರಿಗೆ ತರಲಾದ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ಡಿಎಸ್‌ಪಿಇ) ಕಾಯ್ದೆಯಿಂದ ಇದನ್ನು ನಿಯಂತ್ರಿಸಲಾಗುತ್ತದೆ.

ಡಿಎಸ್‌ಪಿಇ ಕಾಯ್ದೆ ನಿಬಂಧನೆಗಳ ಪ್ರಕಾರ, ಸಿಬಿಐನ ಯಾವುದೇ ತನಿಖೆಗೆ ರಾಜ್ಯ ಸರ್ಕಾರದ ಒಪ್ಪಿಗೆ ಅತ್ಯಗತ್ಯ ಮತ್ತು ಇಲ್ಲಿಯವರೆಗೆ ಒಂಬತ್ತು ರಾಜ್ಯಗಳು ಸಾಮಾನ್ಯ ಒಪ್ಪಿಗೆ ಹಿಂತೆಗೆದುಕೊಂಡಿವೆ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯ ಸಂಸದೀಯ ಸ್ಥಾಯಿ ಸಮಿತಿ ತಿಳಿಸಿದೆ.

ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆ ಹಲವು ಮಿತಿಗಳನ್ನು ಹೊಂದಿದೆ. ಆದ್ದರಿಂದ, ಹೊಸ ಕಾನೂನು ಜಾರಿಗೊಳಿಸುವ ಅವಶ್ಯಕತೆಯಿದೆ. ಸಿಬಿಐನ ಸ್ಥಾನಮಾನ, ಕಾರ್ಯಗಳು ಮತ್ತು ಅಧಿಕಾರಗಳನ್ನು ವ್ಯಾಖ್ಯಾನಿಸಬೇಕು ಹಾಗೂ ಅದರ ಕಾರ್ಯನಿರ್ವಹಣೆ, ವಸ್ತುನಿಷ್ಠತೆ ಮತ್ತು ನಿಷ್ಪಕ್ಷಪಾತವನ್ನು ಖಚಿತಪಡಿಸಿಕೊಳ್ಳಲು ಸುರಕ್ಷತಾ ಕ್ರಮಗಳನ್ನು ರೂಪಿಸಬೇಕು ಎಂದು ಸಮಿತಿ ಹೇಳಿದೆ.

ಸಿಬಿಐನಲ್ಲಿ ಖಾಲಿ ಇರುವ ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡಲಾಗುತ್ತಿಲ್ಲ. ಹಾಗಾಗಿ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಸಿಬಿಐನಲ್ಲಿ ಮಂಜೂರಾದ 7,295 ಹುದ್ದೆಗಳ ಪೈಕಿ 1,709 ಹುದ್ದೆಗಳು ಖಾಲಿ ಇವೆ.

ಸಿಬಿಐ ನಿರ್ದೇಶಕರು ತ್ರೈಮಾಸಿಕ ಆಧಾರದ ಮೇಲೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಆಗಿರುವ ಪ್ರಗತಿಯ ಮೇಲ್ವಿಚಾರಣೆ ಮಾಡಬೇಕು ಮತ್ತು ಸಂಸ್ಥೆಯು ಸಾಕಷ್ಟು ಸಿಬ್ಬಂದಿ ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.