ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಂಧ್ರಪ್ರದೇಶ: ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಪವನ್‌ ಕಲ್ಯಾಣ್‌

Published 19 ಜೂನ್ 2024, 13:41 IST
Last Updated 19 ಜೂನ್ 2024, 13:41 IST
ಅಕ್ಷರ ಗಾತ್ರ

ವಿಜಯವಾಡ: ನಟ, ಜನಸೇನಾ ಮುಖ್ಯಸ್ಥ ಪವನ್‌ ಕಲ್ಯಾಣ್‌ ಅವರು ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಬುಧವಾರ ವೇದ–ಮಂತ್ರ ಘೋಷಗಳ ನಡುವೆ ಅಧಿಕಾರ ಸ್ವೀಕರಿಸಿದರು.

ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ, ಪರಿಸರ, ಅರಣ್ಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಗಳನ್ನು ಪವನ್‌ ಕಲ್ಯಾಣ್‌ ಹೊಂದಿದ್ದಾರೆ. ಗ್ರಾಮೀಣ ನೀರು ಪೂರೈಕೆ ಖಾತೆಯ ಹೊಣೆಯನ್ನೂ ಅವರೇ ಹೊತ್ತಿದ್ದಾರೆ. 

ಜನಸೇನಾದ ಹಲವು ಮುಖಂಡರು ಹಾಗೂ ಇತರರು ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಪವನ್‌ ಕಲ್ಯಾಣ್‌ ಅವರನ್ನು ಅಭಿನಂದಿಸಿದರು. 

ಆಂಧ್ರದ ಪೀಠಾಪುರಂ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಕಲ್ಯಾಣ್‌, ಮೊದಲ ಬಾರಿ ಸಚಿವರಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT