ಮೊರೆನಾ: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಹೈ–ಟೆನ್ಷನ್ ವಿದ್ಯುತ್ ತಂತಿ ತಗುಲಿ 6 ನವಿಲುಗಳು ಮೃತಪಟ್ಟಿವೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ದಿಮಿನಿ ಪ್ರದೇಶದ ಸ್ಮೃತಿ ಗ್ರಾಮದ ದೇಗುಲವ ಮುಂಭಾಗದಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
.ರಾಯಚೂರು | ನಾಯಿ, ನವಿಲು ತಿಂದು ಊರು ಪ್ರವೇಶಿಸಿದ ಚಿರತೆ: ಜನರಲ್ಲಿ ಆತಂಕ.
ದೇಗುಲದ ಸಮೀಪ ಇರುವ ಗದ್ದೆಯಲ್ಲಿ ವಿಹರಿಸುತ್ತಿದ್ದ ನವಿಲುಗಳಿಗೆ ಹೈ–ಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿದ್ದು, ತಕ್ಷಣವೇ ಅಸುನೀಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆ ಬಳಿಕ ವಿದ್ಯುತ್ ಸರಬರಾಜು ಕಂಪನಿ ಹಾಗೂ ಅರಣ್ಯಾಧಿಕಾರಿಗಳನ್ನುಸಂಪರ್ಕಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ. ಬಳಿಕ ಮೃತ ನವಿಲುಗಳ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಗ್ರಾಮಸ್ಥರ ಫೋನ್ಗೆ ಸ್ಪಂದಿಸದೇ ಇದ್ದಿದ್ದು ಅಧಿಕಾರಿಗಳ ನಿರ್ಲಕ್ಷ್ಯ ಎಂದಿರುವ ಉತ್ತರ ವಲಯ ವಿದ್ಯುತ್ ಸರಬರಾಜು ಕಂಪನಿಯ ಪ್ರಧಾನ ವ್ಯವಸ್ಥಾಪಕ ವಿ.ಎಸ್ ಡಂಗಿ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
.ನವಿಲು 'ಬ್ರಹ್ಮಚಾರಿ', ಹಾಗಾಗಿ ಅದನ್ನು ಭಾರತದ ರಾಷ್ಟ್ರಪಕ್ಷಿಯನ್ನಾಗಿ ಘೋಷಿಸಲಾಗಿದೆ!.
ಕಳೆದ ವಾರ ಮಧ್ಯಪ್ರದೇಶದ ಬುಡಕಟ್ಟು ಜನ ಹೆಚ್ಚಿರುವ ಜಬುಬಾ ಜಿಲ್ಲೆಯಲ್ಲಿ 11 ನವಿಲುಗಳು ಮೃತಪಟ್ಟಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದರು.

ಭಾರತದ ರಾಷ್ಟ್ರೀಯ ಪಕ್ಷಿಯಾಗಿರುವ ನವಿಲನ್ನು ವನ್ಯಜೀವಿ ಕಾಯ್ದೆಯ 1ನೇ ಪರಿಚ್ಛೇದಲ್ಲಿ ಸೇರಿಸಲಾಗಿದ್ದು, ಅತಿ ಹೆಚ್ಚು ರಕ್ಷಣೆ ನೀಡಬೇಕು ಎಂದು ಕಾನೂನು ಹೇಳುತ್ತದೆ.
.ಭಾರೀ ವ್ಯಂಗ್ಯಕ್ಕೆ ಗುರಿಯಾದ ನ್ಯಾಯಮೂರ್ತಿ ಮಹೇಶ್ಚಂದ್ರ ಶರ್ಮಾ ‘ನವಿಲು ಕಣ್ಣೀರಿ’ನ ಹೇಳಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.