ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಿದ್ದು, ಸುಮಾರು ₹50,700 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಇದು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ನ (ಬಿಪಿಸಿಎಲ್) ಬಿನಾ ರಿಫೈನರಿಯಲ್ಲಿ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ ಮತ್ತು ರಾಜ್ಯದಾದ್ಯಂತ 10 ಹೊಸ ಕೈಗಾರಿಕಾ ಯೋಜನೆಗಳನ್ನು ಒಳಗೊಂಡಿದೆ.

ಈ ಹೊಸ ಯೋಜನೆಗಳು ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನೆ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿನಾ ರಿಫೈನರಿ ಸುಮಾರು ₹49,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ವರ್ಷಕ್ಕೆ 1200 ಕೆಟಿಪಿಎ (ವರ್ಷಕ್ಕೆ ಕಿಲೋ-ಟನ್) ಎಥಿಲೀನ್ ಮತ್ತು ಪ್ರೊಪಿಲೀನ್ ಉತ್ಪಾದಿಸುತ್ತವೆ. ಇದು ಜವಳಿ, ಪ್ಯಾಕೇಜಿಂಗ್ ಮತ್ತು ಫಾರ್ಮಾ ಮುಂತಾದ ಕ್ಷೇತ್ರಗಳಿಗೆ ಪ್ರಮುಖ ಅಂಶವಾಗಿದೆ.

ದೇಶದ ಆಮದು ಅವಲಂಬನೆ ಕಡಿಮೆ ಮಾಡುವುದಲ್ಲದೆ ಪ್ರಧಾನಿ ಅವರ 'ಆತ್ಮನಿರ್ಭರ ಭಾರತ'ದ ದೂರದೃಷ್ಟಿಯತ್ತ ದಿಟ್ಟ ಹೆಜ್ಜೆಯಾಗಿದೆ. ಇದರಿಂದ ಹೆಚ್ಚಿನ ಉದ್ಯೇಗಾವಕಾಶ ಸೃಷ್ಟಿಯಾಗಲಿದೆ.

ನರ್ಮದಾಪುರಂನಲ್ಲಿ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನಾ ವಲಯಗಳು, ಇಂದೋರ್ನಲ್ಲಿ ಎರಡು ಐಟಿ ಪಾರ್ಕ್ಗಳು, ರತ್ಲಾಮ್ನಲ್ಲಿ ಮೆಗಾ ಇಂಡಸ್ಟ್ರಿಯಲ್ ಪಾರ್ಕ್, ರಾಜ್ಯದಾದ್ಯಂತ ಆರು ಹೊಸ ಕೈಗಾರಿಕಾ ಪ್ರದೇಶಗಳು ಸೇರಿವೆ.

ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ವರ್ಷಾಂತ್ಯದಲ್ಲಿ ನಡೆಯಲಿದೆ.

ಬಳಿಕ ಛತ್ತೀಸ್ಗಢಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ₹6,350 ಕೋಟಿ ಮೌಲ್ಯದ ರೈಲು ಯೋಜನೆ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.