ಲಂಡನ್: ಬ್ರಿಟನ್ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಅಲ್ಲಿನ ಅನಿವಾಸಿ ಭಾರತೀಯರು ಅದ್ದೂರಿ ಸ್ವಾಗತ ಕೋರಿದ್ದಾರೆ. ಪ್ರಧಾನಿ ಅವರನ್ನು ಭೇಟಿಯಾದ ಭಾರತ ಮೂಲದ ಸಂತೋಷ ಎಂಬುವವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ಕ್ಷಣ ತುಂಬಾ ಭಾವನಾತ್ಮಕವಾಗಿತ್ತು ಎಂದು ಬಣ್ಣಿಸಿದ್ದಾರೆ.

'ಪ್ರಧಾನಿ ಮೋದಿ ಅವರನ್ನು ಹತ್ತಿರದಿಂದ ನೋಡಿದೆ. ಅದೊಂದು ಅದ್ಬುತ ಕ್ಷಣವಾಗಿತ್ತು. ನನಗೆ ಕೈ ಕುಲುಕುವ ಅವಕಾಶ ಸಿಕ್ಕಿತು. ಇದು ಅದ್ಭುತ ಅನುಭವ' ಎಂದು ಮತ್ತೋರ್ವ ಅನಿವಾಸಿ ಭಾರತೀಯರಾದ ಗೆಹ್ನಾ ಗೌತಮ್ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಅವರ ಪ್ರೀತಿ ಹೃದಯಸ್ಪರ್ಶಿ..

'ಬ್ರಿಟನ್ನಲ್ಲಿರುವ ಭಾರತೀಯ ಸಮುದಾಯದಿಂದ ದೊರೆತ ಆತ್ಮೀಯ ಸ್ವಾಗತದಿಂದ ಭಾವುಕನಾಗಿದ್ದೇನೆ. ಭಾರತದ ಪ್ರಗತಿಯ ಬಗ್ಗೆ ಅವರ ಪ್ರೀತಿ ಮತ್ತು ಉತ್ಸಾಹ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ' ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್ ಹಾಗೂ ಮಾಲ್ದೀವ್ಸ್ಗೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಇಂದು (ಗುರುವಾರ) ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಜೊತೆ ಮಾತುಕತೆ ನಡೆಸಲಿರುವ ಪ್ರಧಾನಿ, ಹೂಡಿಕೆ, ವ್ಯಾಪಾರ, ರಕ್ಷಣೆ, ಶಿಕ್ಷಣ, ಸಂಶೋಧನೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಐತಿಹಾಸಿಕ ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ(ಎಫ್ಟಿಎ) ಸಹಿ ಹಾಕುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
.ಬ್ರಿಟನ್ ಪ್ರವಾಸದಲ್ಲಿ ಪ್ರಧಾನಿ ಮೋದಿ: ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಸಾಧ್ಯತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.