ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಣಂ ಹಬ್ಬಕ್ಕೆ ಶುಭ ಕೋರಿದ ಪ್ರಧಾನಿ ಮೋದಿ

Last Updated 31 ಆಗಸ್ಟ್ 2020, 6:52 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ದೇಶದ ಜನತೆಗೆ ಓಣಂ ಹಬ್ಬದ ಶುಭಾಶಯ ಕೋರಿದ್ದಾರೆ.

ಓಣಂ, ಸಾಮರಸ್ಯ ಬೆಸೆಯುವ ಅನನ್ಯ ಹಬ್ಬವಾಗಿದೆ. ಕಷ್ಟಪಟ್ಟು ದುಡಿಯುವ ರೈತ ವರ್ಗದವರಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೂ ಹೌದು. ಪ್ರತಿಯೊಬ್ಬರು ಸಂತೋಷ ಮತ್ತು ಉತ್ತಮ ಆರೋಗ್ಯದಿಂದ ಜೀವನ ನಡೆಸಿ. ಪ್ರತಿಯೊಬ್ಬರಿಗೂ ಸಂತೋಷ ಮತ್ತು ಉತ್ತಮ ಆರೋಗ್ಯ ದೊರೆಯಲಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್‌ ಮೂಲಕ ಓಣಂ ಹಬ್ಬದ ಶುಭಾಶಯ ಕೋರಿದ್ದಾರೆ.

'ಮನ್‌ ಕಿ ಬಾತ್‌'ನಲ್ಲಿ ಆಡಿದ ಮಾತುಗಳ ತುಣಕನ್ನು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿ, ಹತ್ತು ದಿನಗಳ ಓಣಂ ಹಬ್ಬದಲ್ಲಿ ನಡೆಯುವ ‘ಪೂಕ್ಕಳಂ' ಹಬ್ಬದ ವಿಡಿಯೊಗಳನ್ನು ಟ್ಯಾಗ್ ಮಾಡಿದ್ದಾರೆ. ಜತೆಗೆ, ರೈತ ಕುಟುಂಬಗಳು ಗದ್ದೆಯಲ್ಲಿ ಭತ್ತ ಕೊಯ್ಯುತ್ತಾ ಹಬ್ಬದಲ್ಲಿ ಪಾಲ್ಗೊಂಡಿರುವ ದೃಶ್ಯಗಳ ತುಣಕನ್ನೂ ಹಂಚಿಕೊಂಡಿದ್ದಾರೆ.

ಗೃಹ ಸಚಿವ ಅಮಿತ್ ಶಾ ಅವರು, ’ಓಣಂ ಉತ್ಸವ, ಜನರಲ್ಲಿ ಸಾಮರಸ್ಯ ತರುವಂತಹ ಆಚರಣೆ. ಈ ಹಬ್ಬದಲ್ಲಿ ದೇಶದ ಜನತೆಗೆ ಉತ್ತಮ ಆರೋಗ್ಯ ಮತ್ತು ಸಮೃದ್ಧಿ ದೊರೆಯಲಿ’ ಎಂದು ಟ್ವೀಟಿಸಿದ್ದಾರೆ. ಓಣಂ ಕೇರಳದ ಜನರಿಗೆ ಪ್ರಮುಖ ಸುಗ್ಗಿಯ ಹಬ್ಬವಾಗಿದೆ. ಪೌರಾಣಿಕ ರಾಜ ಮಹಾಬಲಿಯ ನೆನಪಿನಲ್ಲಿ ಇದನ್ನು ಆಚರಿಸಲಾಗುತ್ತದೆ. ಈ ಹಬ್ಬವು ಎಲ್ಲರ ಜೀವನದಲ್ಲಿ ಸಂತೋಷ, ಸಾಮರಸ್ಯ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ ಎಂದು ಶಾ ಶುಭ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT