ಕೆವಾಡಿಯಾ(ಗುಜರಾತ್): ಕೆವಾಡಿಯಾ ಸಮೀಪದಲ್ಲಿರುವ ಸರ್ದಾರ್ ‘ಏಕತಾ ಪ್ರತಿಮೆ‘ಯ ಸ್ಥಳದಿಂದ ನರ್ಮದಾ ಜಿಲ್ಲೆಯ ಸಬರಮತಿ ನಡುವೆ ಹಾರಾಟ ನಡೆಸುವ ‘ಸೀಪ್ಲೇನ್‘ ಸೇವೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು.

ಇಲ್ಲಿಗೆ ಸಮೀಪವಿರುವ ಸರ್ದಾರ್ ಸರೋವರ್ ಅಣೆಕಟ್ಟಿನ ಹತ್ತಿರವಿರುವ ‘ಪಾಂಡ್ -3‘ರರಿಂದ ಡಬಲ್ ಎಂಜಿನ್ ವಿಮಾನದಲ್ಲಿ ಕುಳಿತುಕೊಳ್ಳುವ ಮೂಲಕ ಮೋದಿಯವರು ಸೀಪ್ಲೇನ್ ಸೇವೆಯನ್ನು ಉದ್ಘಾಟಿಸಿದರು.

ವಿಮಾನ ಹತ್ತುವ ಮೊದಲು ಮೋದಿ ವಾಟರ್ ಏರೋಡ್ರೋಮ್‌ನಲ್ಲಿ ಸ್ವಲ್ಪ ಸಮಯ ಕಳೆದರು ಮತ್ತು ಸೀಪ್ಲೇನ್ ಸೇವೆಯ ಬಗ್ಗೆ ವಿವರಗಳನ್ನು ಪಡೆದರು.

ಸರ್ದಾರ್ ಸರೋವರದ ‘ಪಾಂಡ್–3‘ ದಿಂದ ಮೋದಿ ಅವರನ್ನು ಹೊತ್ತು ಹಾರಿದ 19 ಆಸನಗಳ ವಿಮಾನ, 40 ನಿಮಿಷಗಳಲ್ಲಿ ಸುಮಾರು 200 ಕಿ.ಮೀ ದೂರವನ್ನು ಕ್ರಮಿಸಿ, ಸಬರಮತಿ ರಿವರ್‌ಫ್ರಂಟ್ ನೀರಿನಲ್ಲಿ ಇಳಿಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.