‘ನೈನಿತಾಲ್‌ನಲ್ಲಿ ಭಾರಿ ಮಳೆಯಾಗುತ್ತಿದೆ. ಅಲ್ಲಲ್ಲಿ ಗುಡ್ಡ ಕುಸಿಯುತ್ತಿದೆ. ಹೀಗಾಗಿ ಗುಡ್ಡ ಪ್ರದೇಶದಿಂದ ಜನರು ಬೇರೆಡೆ ಸ್ಥಳಾಂತರಗೊಂಡಿದ್ದಾರೆ’ ಎಂದು ಚಹಾ ಅಂಗಡಿಯ ದಿನೇಶ್ ಸುಂತಾ ಆತಂಕ ವ್ಯಕ್ತಪಡಿಸಿದ್ದಾರೆ.
ಧೊರೊತಿ ಸೀಟ್ 2,290 ಮೀಟರ್ ಎತ್ತರದಲ್ಲಿದೆ. ಬ್ರಿಟಿಷ್ ಸೇನಾಧಿಕಾರಿ ಕರ್ನಲ್ ಕೆಲ್ಲೆಟ್ ಎಂಬುವವರು ತಮ್ಮ ಪತ್ನಿಯ ನೆನಪಿನಲ್ಲಿ ಇಲ್ಲಿ ಕೂತು, ಪೇಯಿಂಟಿಂಗ್ ಮಾಡುತ್ತಿದ್ದರು. ಕೆಲ್ಲೆಟ್ ಅವರ ಪತ್ನಿ ಇಂಗ್ಲೆಂಡ್‌ಗೆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅವರಿಗೆ ಸೆಪ್ಟಿಸಿಮಿಯಾ ಕಾಡಿತ್ತು. ಇದರಿಂದ ಅಂಗಾಂಗ ವೈಫಲ್ಯದಿಂದ ಅವರು ಮೃತರಾದರು.
ಈ ಪರ್ವತದ ಮೇಲೆ ಟಿಫಿನ್ ಟಾಪ್ ಇದ್ದು, ಇದನ್ನು ತಲುಪಲು ನೈನಿತಾಲ್‌ನಿಂದ ಮೂರು ಕಿಲೋ ಮೀಟರ್ ನಡದೇ ಸಾಗಬೇಕು. ಧೊರೊತಿ ನೋಡಲು ಸ್ಥಳೀಯರು ಹಾಗೂ ದೇಶದ ನಾನಾ ಕಡೆಯಿಂದ ಬರುತ್ತಿದ್ದರು. ಇನ್ನು ಟಿಫಿನ್ ಟಾಪ್ ಎಂಬುದು ನೆನಪು ಮಾತ್ರ.