ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣೆ | ಪೋಶೆ ಕಾರು ಅಪಘಾತ: ಅಪ್ರಾಪ್ತನಿಗೆ ಗೃಹಬಂಧನ

Published 5 ಜೂನ್ 2024, 16:02 IST
Last Updated 5 ಜೂನ್ 2024, 16:02 IST
ಅಕ್ಷರ ಗಾತ್ರ

ಪುಣೆ: ಪೋಶೆ ಕಾರು ಅಪಘಾತ ಪ್ರಕರಣ ಸಂಬಂಧ ಅಪ್ರಾಪ್ತನ ಗೃಹಬಂಧನ ಅವಧಿಯನ್ನು ಇಲ್ಲಿನ ಬಾಲ ನ್ಯಾಯ ಮಂಡಳಿಯು ಜೂನ್ 12ರವರೆಗೆ ವಿಸ್ತರಿಸಿದೆ.

ಈ ಪ್ರಕರಣದಲ್ಲಿ ಬಾಲಕನ ತಪ್ಪು ಇಲ್ಲ ಎಂಬಂತೆ ತೋರಿಸಲು ಅಪಘಾತ ಸಂಭವಿಸಿದ ಬಳಿಕ ಅಪ್ರಾಪ್ತನ ರಕ್ತದ ಮಾದರಿ ಬದಲಿಗೆ ತಾಯಿಯ ರಕ್ತದ ಮಾದರಿಯನ್ನು ಇರಿಸಿರುವುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ಖಚಿತವಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆತಿಳಿಸಿದರು.   

ಮೇ 19ರಂದು ಕಲ್ಯಾಣಿ ನಗರದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಟೆಕಿಗಳು ಮೃತಪಟ್ಟಿದ್ದರು. ಟೆಕಿಗಳು ಇದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪೋಶೆ ಕಾರನ್ನು 17 ವರ್ಷದ ಅಪ್ರಾಪ್ತ ಚಲಾಯಿಸಿದ್ದ. ಜೊತೆಗೆ ಆತ ಮದ್ಯಪಾನ ಮಾಡಿದ್ದ ಎಂದು ಪೊಲೀಸರು ದೂರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT