ಬದರಿನಾಥ (ಉತ್ತರಾಖಂಡ): ಆರು ತಿಂಗಳಿಂದ ಮುಚ್ಚಲ್ಪಟ್ಟಿದ್ದ ಉತ್ತರಾಖಂಡದ ಚಮೋಲಿ ಜಿಲ್ಲೆಯ ಬದರಿನಾಥ ದೇವಾಲಯದ ದ್ವಾರಗಳನ್ನು ಭಾನುವಾರ ಭಕ್ತರ ದರ್ಶನಕ್ಕಾಗಿ ತೆರೆಯಲಾಗಿದೆ.

ಭಗವಂತ ವಿಷ್ಣುವಿಗೆ ಸಮರ್ಪಿತವಾದ ದೇವಾಲಯದ ಬಾಗಿಲುಗಳನ್ನು ವೇದ ಮಂತ್ರಗಳ ನಡುವೆ ಬೆಳಿಗ್ಗೆ 6 ಗಂಟೆಗೆ ತೆರೆಯಲಾಯಿತು.

ವಿವಿಧ ಬಗೆಯ ಹದಿನೈದು ಟನ್ ಹೂವುಗಳಿಂದ ದೇವಾಲಯವನ್ನು ಅಲಂಕರಿಸಲಾಗಿತ್ತು. ಭಾರತೀಯ ಸೇನೆಯು ದೇವಾಲಯದ ಮುಂದೆ ಭಕ್ತಿ ಗೀತೆಯನ್ನು ನುಡಿಸಿತು.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರ ಭಟ್ ಮತ್ತು ತೆಹ್ರಿ ಶಾಸಕ ಕಿಶೋರ್ ಉಪಾಧ್ಯಾಯ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬದರಿನಾಥ ಧಾಮದ ಮುಖ್ಯ ಅರ್ಚಕ, ಧರ್ಮಾಧಿಕಾರಿ ಮತ್ತು ವೇದಪತಿಗಳು ಮೊದಲು ವಿಶೇಷ ಪೂಜೆ ಸಲ್ಲಿಸಿದರು.

ಮುಖ್ಯ ದೇವಾಲಯದ ಜೊತೆಗೆ, ಬದರಿನಾಥ ಧಾಮದಲ್ಲಿರುವ ಗಣೇಶ, ಘಂಟಕರ್ಣ, ಆದಿ ಕೇದಾರೇಶ್ವರ, ಆದಿ ಗುರು ಶಂಕರಾಚಾರ್ಯ ದೇವಸ್ಥಾನ ಮತ್ತು ಮಾತಾ ಮೂರ್ತಿ ದೇವಸ್ಥಾನದ ಬಾಗಿಲುಗಳನ್ನು ಸಹ ಭಕ್ತರಿಗಾಗಿ ತೆರೆಯಲಾಗಿದೆ.

ಬದರಿನಾಥಕ್ಕೆ ಬರುವವರ ಪ್ರಯಾಣ ಸುರಕ್ಷಿತ ಮತ್ತು ಸುಗಮವಾಗಿಸಲು ಸ್ಥಳೀಯ ಆಡಳಿತವು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ವರ್ಷ ದೀಪಾವಳಿ ಬಳಿಕ ಚಾರ್ ಧಾಮಗಳಾದ ಬದರಿನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ದೇಗುಲಗಳ ಬಾಗಿಲು ಮುಚ್ಚಲಾಗುತ್ತದೆ. ಏಪ್ರಿಲ್–ಮೇ ತಿಂಗಳಿನಲ್ಲಿ ಈ ದೇಗುಲಗಳ ಬಾಗಿಲು ತೆರೆಯಲಾಗುತ್ತದೆ. ದೇಶ–ವಿದೆಶಗಳಿಂದ ಜನರು ಇಲ್ಲಿಗೆ ಅಗಮಿಸುತ್ತಾರೆ.

ಹಿಮಾಲಯದ ತಪ್ಪಲಿನ ಕೇದಾರನಾಥ ದೇಗುಲದ ಬಾಗಿಲನ್ನು ಕಳೆದ ಶುಕ್ರವಾರವೇ ತೆರೆಯಲಾಗಿದ್ದು, ಗಂಗೋತ್ರಿ ಮತ್ತು ಯಮುನೋತ್ರಿ ದೇಗುಲಗಳ ಬಾಗಿಲನ್ನು ಮೇ 30ರಂದೇ ತೆರೆಯಲಾಗಿದೆ.
.Kedarnath Yatra | ಭಕ್ತರಿಗೆ ದರ್ಶನ ನೀಡಿದ 'ಕೇದಾರನಾಥ'.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.