ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದರು.

ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ದೇಶೀಯ ಕೋವಿಡ್ ಲಸಿಕೆ 'ಕೊವ್ಯಾಕ್ಸಿನ್' ಹಾಕಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ

' ನಾನು ಇಂದು ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದೆ. ಕೊರೊನಾ ವೈರಸ್ ಅನ್ನು ಮಣಿಸಲು ನಮ್ಮ ಮುಂದಿರುವ ಕೆಲವೇ ಆಯ್ಕೆಗಳಲ್ಲಿ ಲಸಿಕೆಯೂ ಒಂದು,' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

' ಒಂದು ವೇಳೆ ಲಸಿಕೆ ಪಡೆಯಲು ನೀವು ಅರ್ಹರಾಗಿದ್ದರೆ, ಕೂಡಲೇ ಲಸಿಕೆ ಪಡೆಯಿರಿ. ಅದಕ್ಕಾಗಿ ನೋಂದಣಿ ಮಾಡಿಕೊಳ್ಳಿ,' ಎಂದು ಅವರು ನಾಗರಿಕರಿಗೆ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: ‘ಪ್ರಧಾನಿ ಹಾಕಿಸಿಕೊಂಡ ಲಸಿಕೆಯನ್ನೇ ನಮಗೆ ನೀಡಿ’: ಕೋವ್ಯಾಕ್ಸಿನ್ಗೆ ಭಾರೀ ಬೇಡಿಕೆ

ಏಮ್ಸ್ನಲ್ಲಿ ನರ್ಸ್ಗಳಾಗಿ ಕಾರ್ಯನಿರ್ವಹಿಸುತ್ತಿರುವ ಪುದುಚೇರಿಯ ಪಿ. ನಿವೇದಾ ಮತ್ತು ಪಂಜಾಬ್ನ ನಿಶಾ ಶರ್ಮಾ ಎಂಬುವರು ಪ್ರಧಾನಿಗೆ ಲಸಿಕೆ ನೀಡಿದರು.

'ದೇಶದ ಪ್ರಧಾನಿಗೆ ನಾನು ಕೋವ್ಯಾಕ್ಸಿನ್ ಲಸಿಕೆ ನೀಡಿದೆ. ಅವರು ನನ್ನೊಂದಿಗೆ ಮಾತನಾಡಿದರು. ಅವರನ್ನು ಭೇಟಿಯಾಗಿದ್ದು, ಅವರಿಗೆ ಲಸಿಕೆ ನೀಡಿದ್ದು ಮರೆಯಲಾಗದ ಕ್ಷಣ,' ಎಂದು ನಿಶಾ ಶರ್ಮಾ ಹೇಳಿದ್ದಾರೆ.

ಮಾರ್ಚ್ 1ರ ಸೋಮವಾರ ಪ್ರಧಾನಿ ಮೋದಿ ಕೋವಿಡ್ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿದ್ದರು. ಪುದುಚೇರಿಯ ಪಿ.ನಿವೇದಾ ಪ್ರಧಾನಿಗೆ ಭಾರತ್ ಬಯೋಟೆಕ್ನ 'ಕೊವ್ಯಾಕ್ಸಿನ್' ಲಸಿಕೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.