ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್‌ 15ರಂದು ಸಂಸದ್‌ ಟಿವಿಗೆ ಪ್ರಧಾನಿ ಮೋದಿ ಚಾಲನೆ

Last Updated 13 ಸೆಪ್ಟೆಂಬರ್ 2021, 16:00 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಚಾನೆಲ್‌ 'ಸಂಸದ್‌ ಟಿವಿ'ಗೆ ಸೆಪ್ಟೆಂಬರ್‌ 15ರಂದು ಚಾಲನೆ ನೀಡಲಿದ್ದಾರೆ ಎಂದು ವರದಿಯಾಗಿದೆ.

ಲೋಕಸಭಾ ಟಿವಿ ಮತ್ತು ರಾಜ್ಯಸಭಾ ಟಿವಿಯನ್ನು ವಿಲೀನಗೊಳಿಸಿ, ಸಂಸದ್‌ ಟಿವಿ ಎಂಬ ಹೆಸರಿನ ಚಾನೆಲ್‌ ಆರಂಭಿಸಲಾಗುತ್ತಿದೆ. ಉಭಯ ಸದನಗಳ ಕಾರ್ಯಾಚರಣೆ ಕುರಿತು ಸಂಸದ್ ಟಿವಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.

ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ಎಎನ್‌ಐ ಸುದ್ದಿ ಮಾಧ್ಯಮ ಟ್ವೀಟಿಸಿದೆ.

ಕಾಂಗ್ರೆಸ್‌ ಮುಖಂಡ ಕರಣ್‌ ಸಿಂಗ್‌, ಅರ್ಥಶಾಸ್ತ್ರಜ್ಞ ವಿವೇಕ್‌ ದೆಬರಾಯ್‌, ನೀತಿ ಆಯೋಗ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಬ್‌ ಕಾಂತ್‌ ಹಾಗೂ ಅಡ್ವೊಕೇಟ್‌ ಹೇಮಂತ್‌ ಬಾತ್ರಾ ಅವರು ಹೊಸ ಚಾನೆಲ್‌ನಲ್ಲಿ ಬೇರೆ ಬೇರೆ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದು ಪಿಟಿಐ ಇತ್ತೀಚೆಗೆ ವರದಿ ಮಾಡಿತ್ತು.

ಸಂಸತ್‌ ಅಧಿವೇಶನದ ಸಂದರ್ಭದಲ್ಲಿ ಸಂಸದ್‌ ಟಿವಿ ಎರಡು ಚಾನೆಲ್‌ಗಳಲ್ಲಿ ಲೋಕಸಭೆ ಮತ್ತು ರಾಜ್ಯ ಸಭೆ ಕಲಾಪಗಳನ್ನು ಪ್ರಸಾರ ಮಾಡಲಿದೆ.

ನಿವೃತ್ತ ಐಎಎಸ್‌ ಅಧಿಕಾರಿ ಮತ್ತು ಜವಳಿ ಸಚಿವಾಲಯದ ಕಾರ್ಯದರ್ಶಿ ರವಿ ಕಪೂರ್‌ ಅವರು ಸಂಸದ್‌ ಟಿವಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲೋಕಸಭೆ ಕಾರ್ಯಾಲಯದ ಜಂಟಿ ಕಾರ್ಯದರ್ಶಿ ಮನೋಜ್‌ ಅರೋರಾ ಚಾನೆಲ್‌ನ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT