ನವದೆಹಲಿ: ರೈಲುಗಳಲ್ಲಿ ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಕೈಬಿಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಂಸತ್ನಲ್ಲಿ ತಿಳಿಸಿದ್ದಾರೆ.

ಉಪಗ್ರಹ ಸಂವಹನ ತಂತ್ರಜ್ಞಾನದ ಮೂಲಕ ಹೌರಾ ರಾಜಧಾನಿ ಎಕ್ಸ್ಪ್ರೆಸ್ನಲ್ಲಿ ವೈ–ಫೈ ಆಧಾರಿತ ಇಂಟರ್ನೆಟ್ ಸೇವೆಯನ್ನು ಪ್ರಾಯೋಗಿಕವಾಗಿ ನೀಡಲಾಗಿತ್ತು ಎಂದು ಲೋಕಸಭೆಗೆ ಸಲ್ಲಿಸಿದ ಲಿಖಿತ ಉತ್ತರದಲ್ಲಿ ಸಚಿವರು ತಿಳಿಸಿದ್ದಾರೆ.

‘ಈ ಯೋಜನೆಗೆ ಹೆಚ್ಚಿನ ಬಂಡವಾಳ ಬೇಕಾಗುತ್ತದೆ. ಹೀಗಾಗಿ ವೆಚ್ಚದ ದೃಷ್ಟಿಯಿಂದ ಇದು ಪರಿಣಾಮಕಾರಿಯಾಗಿಲ್ಲ’ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

‘ಯೋಜನೆಯನ್ನು ಕೈಬಿಟ್ಟಿರುವ ಕಾರಣ ಪ್ರಸ್ತುತ, ರೈಲುಗಳಲ್ಲಿ ವೈ-ಫೈ ಆಧಾರಿತ ಇಂಟರ್ನೆಟ್ ಸೇವೆಗಳನ್ನು ಒದಗಿಸಲು ಸೂಕ್ತ ವೆಚ್ಚದ ತಂತ್ರಜ್ಞಾನ ಲಭ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

ಮುಂದಿನ ನಾಲ್ಕು ಅಥವಾ ನಾಲ್ಕೂವರೆ ವರ್ಷಗಳಲ್ಲಿ ರೈಲುಗಳಲ್ಲಿ ವೈ–ಫೈ ಸೇವೆ ಒದಗಿಸುವುದಾಗಿ ಮಾಜಿ ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರು 2019ರಲ್ಲಿ ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.