ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆ ಕಾರ್ಯಾಚರಣೆ: ಪುಲ್ವಾಮಾ ದಾಳಿಗೆ ನೆರವು ನೀಡಿದ್ದ ಉಗ್ರನ ಹತ್ಯೆ

ಅನಂತನಾಗ್ ಜಿಲ್ಲೆ
Last Updated 18 ಜೂನ್ 2019, 20:00 IST
ಅಕ್ಷರ ಗಾತ್ರ

ಶ್ರೀನಗರ: ಪುಲ್ವಾಮಾ ದಾಳಿಗೆ ವಾಹನ ಒದಗಿಸಿದ್ದ ಉಗ್ರ ಸೇರಿ ಇಬ್ಬರು ಉಗ್ರರು ಮಂಗಳವಾರಸೇನೆ ನಡೆಸಿದ ಕಾರ್ಯಾಚರಣೆ
ಯಲ್ಲಿ ಹತರಾಗಿದ್ದಾರೆ. ಈ ಮೂಲಕ ದಾಳಿಯಲ್ಲಿ ಪಾಲ್ಗೊಂಡಿದ್ದ ಎಲ್ಲ ಉಗ್ರರು ಮೃತಪಟ್ಟಂತೆ ಆಗಿದೆ.

ಜೈಷೆ–ಎ–ಮೊಹಮ್ಮದ್‌ ಕಮಾಂಡರ್ ಸಜ್ಜದ್‌ ಮಕ್ಬೂಲ್‌ ಭಟ್‌ ಮತ್ತು ತೌಸಿಫ್‌ ಭಟ್‌ ಹತರಾಗಿದ್ದು, ಸಜ್ಜದ್‌ ಪುಲ್ವಾಮಾ ದಾಳಿಗೆ ವಾಹನ ಒದಗಿಸಿದ್ದಲ್ಲದೆ, ಆತ್ಮಾಹುತಿ ದಾಳಿಕೋರನ ಜೊತೆ ಜಮ್ಮು–ಶ್ರೀನಗರ ಹೆದ್ದಾರಿಯವರೆಗೂ ಪ್ರಯಾಣಿಸಿದ್ದ.

ಸಜ್ಜದ್‌ ಜೊತೆಇದ್ದ ಇನ್ನೊಬ್ಬ ಉಗ್ರ ತೌಸಿಫ್‌ ಭಟ್‌ ಆತ್ಮಾಹುತಿ ದಾಳಿಕೋರನಿಗೆ ರೂಪುರೇಷೆಯನ್ನು ಸಿದ್ಧಪಡಿಸಿಕೊಟ್ಟಿದ್ದಲ್ಲದೆ, ದಾಳಿ ನಡೆಯುವವರೆಗೂ ಆತನನ್ನು ನಿಯಂತ್ರಿಸಿದ್ದ. ಅನಂತನಾಗ್‌ ಜಿಲ್ಲೆಯ ಬಿಜ್‌ಬೆಹರಾ ಪ್ರದೇಶದ ಮರ್‌ಹಾಮಾ ಗ್ರಾಮದಲ್ಲಿಈ ಇಬ್ಬರು ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ಸೇನೆ ಸೋಮವಾರ ಸಂಜೆಯಿಂದಲೇ ಕಾರ್ಯಾಚರಣೆ ನಡೆಸಿತ್ತು. ಗುಂಡಿನ ಚಕಮಕಿಯಲ್ಲಿ ಒಬ್ಬ ಸೈನಿಕ ಕೂಡ ಹುತಾತ್ಮರಾಗಿದ್ದಾರೆ.

ಇಬ್ಬರು ಹುತಾತ್ಮ: ಬೆಂಗಾವಲು ವಾಹನ ಗುರಿಯಾಗಿಸಿ ಉಗ್ರರುನಡೆಸಿದ್ದ ದಾಳಿಯಲ್ಲಿ ಗಾಯಗೊಂಡಿದ್ದ ಒಂಬತ್ತು ಸೈನಿಕರಲ್ಲಿಇಬ್ಬರು ಮೃತಪಟ್ಟಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ತೀವ್ರ ಗಾಯಗೊಂಡಿದ್ದ ಇವರನ್ನು 92ನೇ ಬೇಸ್‌ನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಪುಲ್ವಾಮಾ ಮಾದರಿಯಲ್ಲಿ ಅರಿಹಲ್‌–ಲಸ್ಸಿಪೊರಾ ರಸ್ತೆಯಲ್ಲಿ ಸೋಮವಾರ ಉಗ್ರರುದಾಳಿ ನಡೆಸಿದ್ದರು. ಈ ಯತ್ನ ವಿಫಲವಾಗಿತ್ತು.

ಮೇಜರ್ ಕೇತನ್ ಅಂತ್ಯಸಂಸ್ಕಾರ

ಮೀರಠ್‌: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯ ವೇಳೆಹುತಾತ್ಮರಾಗಿರುವ ಮೇಜರ್‌ಕೇತನ್‌ ಶರ್ಮಾ ಅವರ ಅಂತ್ಯಸಂಸ್ಕಾರ ಉತ್ತರ ಪ್ರದೇಶದ ಮೀರಠ್‌ನಲ್ಲಿ ಮಂಗಳವಾರ ನೆರವೇರಿತು.

ಅಂತ್ಯಸಂಸ್ಕಾರದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಮೃತದೇಹವನ್ನು ಮೀರಠ್‌ಗೆ ಕೊಂಡೊಯ್ಯುವುದಕ್ಕೂ ಮುನ್ನ ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಗೌರವ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT