ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲ್ವಾಮಾ ರೀತಿಯ ಉಗ್ರ ದಾಳಿ ಸಂಚು ವಿಫಲಗೊಳಿಸಿದ ಸೇನೆ; 52 ಕೆಜಿ ಸ್ಫೋಟಕ ಪತ್ತೆ

Last Updated 17 ಸೆಪ್ಟೆಂಬರ್ 2020, 15:29 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹೆದ್ದಾರಿ ಬಳಿ 52 ಕೆ.ಜಿ ಸ್ಫೋಟಕ ವಸ್ತುಗಳನ್ನು ಭಾರತೀಯ ಸೇನೆ ಪತ್ತೆ ಮಾಡಿದೆ.

ಗುರುವಾರ ಬೆಳಗ್ಗೆ 8 ಗಂಟೆಗೆ ಶೋಧ ಕಾರ್ಯ ಆರಂಭಿಸಿದ್ದೆವು. ಹಣ್ಣಿನ ತೋಟವೊಂದರಲ್ಲಿಹೂತು ಹಾಕಿದ್ದಸಿಂಟೆಕ್ಸ್ ಟ್ಯಾಂಕ್ ಒಳಗಡೆ 52 ಕೆಜಿ ಸ್ಫೋಟಕ ವಸ್ತು ಪತ್ತೆಯಾಗಿದೆ. ಈ ಸ್ಫೋಟಕಗಳನ್ನು416 ಪೊಟ್ಟಣಗಳಾಗಿ ವಿಂಗಡಿಸಲಾಗಿದ್ದುಪ್ರತಿಯೊಂದು ಪೊಟ್ಟಣವೂ125 ಗ್ರಾಂ ತೂಕ ಹೊಂದಿದೆ ಎಂದು ಸೇನಾಪಡೆ ಹೇಳಿಕೆ ನೀಡಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಹೆಚ್ಚಿನ ಶೋಧ ನಡೆಸಿದಾಗ 50 ಸ್ಫೋಟಕಗಳನ್ನು ಹೊಂದಿರುವ ಮತ್ತೊಂದು ಟ್ಯಾಂಕ್ ಕಂಡುಬಂದಿದೆ ಎಂದು ಸೇನೆ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ಕಳೆದ ವರ್ಷ ಫೆಬ್ರವರಿ 14 ರಂದು ಬೆಂಗಾವಲಿನಲ್ಲಿ ಪ್ರಯಾಣಿಸುತ್ತಿದ್ದ 40 ಕ್ಕೂ ಹೆಚ್ಚು ಸಿಆರ್‌ಪಿಎಫ್ ಸೈನಿಕರು ಆತ್ಮಾಹುತಿ ಬಾಂಬರ್‌ ಸ್ಫೋಟಿಸಿದ ಬಾಂಬ್‌ ದಾಳಿಯಲ್ಲಿ ಹುತಾತ್ಮರಾಗಿದ್ದರು.ಸುಮಾರು 35 ಕೆಜಿ ಆರ್‌ಡಿಎಕ್ಸ್ ಸ್ಫೋಟಕ ಹೊಂದಿದ್ದಕಾರೊಂದನ್ನು ನುಗ್ಗಿಸಿ ಈ ದಾಳಿ ನಡೆಸಲಾಗಿತ್ತು. ಇದಾಗಿ ಕೆಲವು ವಾರಗಳ ನಂತರ, ಪಾಕಿಸ್ತಾನದ ಬಾಲಕೋಟ್‌ನಲ್ಲಿ ಜೈಶ್-ಇ-ಮೊಹಮ್ಮದ್ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ವೈಮಾನಿಕ ದಾಳಿ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT