ರಾಯ್ಬರೇಲಿ (ಉತ್ತರ ಪ್ರದೇಶ): ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬ್ರಿಟನ್ ಪೌರತ್ವ ಹೊಂದಿದ್ದು, ಇದು ಭಾರತದ ಕಾನೂನಿನ ಉಲ್ಲಂಘನೆ’ ಎಂದು ಆರೋಪಿಸಿ ಸಲ್ಲಿಸಲಾಗಿರುವ ಕ್ರಿಮಿನಲ್ ಅರ್ಜಿಯನ್ನು ಪರಿಗಣಿಸಿರುವ ಇಲ್ಲಿನ ಶಾಸಕರ–ಸಂಸದರ ವಿಶೇಷ ನ್ಯಾಯಾಲಯ, ಡಿಸೆಂಬರ್ 5ರಂದು ವಿಚಾರಣೆ ನಿಗದಿ ಮಾಡಿದೆ.

ಬೆಂಗಳೂರಿನ ಎಸ್.ವಿಘ್ನೇಶ್ ಶಿಶಿರ್ ಅವರು ಈ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ನ್ಯಾಯಾಧೀಶ ವಿವೇಕ್ ಕುಮಾರ್, ಈ ವಿಚಾರವಾಗಿ ಈ ವರೆಗೆ ನಡೆದಿರುವ ತನಿಖೆ ಕುರಿತಂಥೆ ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಕೊತ್ವಾಲಿ ಪೊಲೀಸ್ ಠಾಣೆಗೆ ನಿರ್ದೇಶಿಸಿದರು ಎಂದು ‘ದಿ ಪ್ರಿಂಟ್‘ ವರದಿ ಮಾಡಿದೆ

‘ರಾಹುಲ್ ಗಾಂಧಿಯವರು ಬಿಎನ್ಎಸ್ಎಸ್, ವಿದೇಶಿಯರ ಕಾಯ್ದೆ, ಪಾಸ್ಪೋರ್ಟ್ ಹಾಗೂ ಇತರ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ. ಶತ್ರುದೇಶಗಳಿಗೆ ಭಾರತ ಕುರಿತು ಮಾಹಿತಿ ನೀಡಿ, ನಕಲಿ ಪಾಸ್ಪೋರ್ಟ್ ಪಡೆದಿದ್ದಾರೆ’ ಎಂದು ವಿಘ್ನೇಶ್ ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.