ನವದೆಹಲಿ: ಕರ್ಣಿ ಸೇನಾದ ವ್ಯಕ್ತಿಯೊಬ್ಬರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರೆ 25 ಮಂದಿ ಸಂಸದರಿಗೆ ಜೀವ ಬೆದರಿಕೆ ಹಾಕುತ್ತಿರುವ ವಿಡಿಯೊವನ್ನು ಕಾಂಗ್ರೆಸ್ ಬುಧವಾರ ಬಿಡುಗಡೆಗೊಳಿಸಿದ್ದು, ಬಿಜೆಪಿ–ಆರ್ಎಸ್ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

‘ಆರ್ಎಸ್ಎಸ್–ಬಿಜೆಪಿ ರಾಜಕೀಯ ವ್ಯವಸ್ಥೆಯನ್ನು ’ಗೋಡ್ಸೆ ಫ್ಯಾಕ್ಟರಿ’ ಎಂದಿರುವ ಕಾಂಗ್ರೆಸ್, ‘ರಾಜಕೀಯ ಎದುರಾಳಿಗಳ ವಿರುದ್ಧದ ಹಿಂಸೆಯನ್ನು (ವಿಶೇಷವಾಗಿ ಗಾಂಧಿ ಕುಟುಂಬದ ವಿರುದ್ಧ) ಕಾನೂನುಬದ್ಧಗೊಳಿಸುವ ಉದ್ದೇಶಪೂರ್ವಕ ಅಭಿಯಾನವನ್ನು ಬಿಜೆಪಿ ನಡೆಸುತ್ತಿದೆ’ ಎಂದು ಆರೋಪಿಸಿದೆ.

‘ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ನ ಇತರೆ 25 ಸಂಸದರಿಗೆ ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದ ರಾಜ್ ಸಿಂಗ್ ಎಂಬ ವ್ಯಕ್ತಿಯನ್ನು ಕೋಟದ ಬೊರ್ಖೇಡಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ವಿಚಾರಣೆ ನಡೆಯುತ್ತಿದೆ’ ಎಂದು ಕೋಟದ ಪೊಲೀಸ್ ವರಿಷ್ಠಾಧಿಕಾರಿ ತೇಜಸ್ವಿನಿ ಗೌತಮ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ನಿಂದಿಸಿದ ಕಾಂಗ್ರೆಸ್ನ 25 ಸಂಸದರ ವಿರುದ್ಧ ಕರ್ಣಿ ಸೇನಾ ಕಾರ್ಯಕರ್ತರು ತೀವ್ರ ಆಕ್ರೋಶಗೊಂಡಿದ್ದಾರೆ. ಅವರನ್ನು 24 ಗಂಟೆಯೊಳಗೆ ಬಂಧಿಸದಿದ್ದರೆ ನಾವು ಅವರ ಮನೆಗೆ ನುಗ್ಗಿ ಒಬ್ಬೊಬ್ಬರನ್ನೇ ಗುಂಡಿಕ್ಕಿ ಸಾಯಿಸುತ್ತೇವೆ, ಎಲ್ಲವನ್ನೂ ಧ್ವಂಸಗೊಳಿಸುತ್ತೇವೆ. ರಾಹುಲ್ ಗಾಂಧಿ... ನೀವೂ ಕೂಡ ಎಚ್ಚರದಿಂದ ಕೇಳಿಸಿಕೊಳ್ಳಿ, ನಿಮ್ಮ ಮನೆಗೂ ನುಗ್ಗಿ, ಗುಂಡಿಕ್ಕುತ್ತೇವೆ’ ಎಂದು ಕರ್ಣಿಸೇನಾದ ವಕ್ತಾರ ಎಂದು ಹೇಳಿಕೊಂಡಿದ್ದ ವ್ಯಕ್ತಿ ವಿಡಿಯೊದಲ್ಲಿ ಬೆದರಿಕೆ ಹಾಕಿದ್ದರು.

ಕಾಂಗ್ರೆಸ್ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ವಿಡಿಯೊವನ್ನು ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದು, ಆರ್ಎಸ್ಎಸ್–ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.