ಸೋಮವಾರ, 2 ಫೆಬ್ರುವರಿ 2026
×
ADVERTISEMENT
ADVERTISEMENT

ಸೇನಾ ವಿಚಾರ ಪ್ರಸ್ತಾಪಿಸಿದ ರಾಹುಲ್‌ ಗಾಂಧಿ: ಲೋಕಸಭೆಯಲ್ಲಿ ಕೋಲಾಹಲ

Published : 2 ಫೆಬ್ರುವರಿ 2026, 19:30 IST
Last Updated : 2 ಫೆಬ್ರುವರಿ 2026, 19:30 IST
ಫಾಲೋ ಮಾಡಿ
Comments
ಪದೇ ಪದೇ ಎಚ್ಚರಿಕೆ ನೀಡಿದ ಸ್ಪೀಕರ್
ಅಪ್ರಕಟಿತ ಪುಸ್ತಕವನ್ನು ಉಲ್ಲೇಖಿಸದಂತೆ  ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರು ರಾಹುಲ್‌ ಗಾಂಧಿ ಅವರಿಗೆ ಪದೇ ಪದೇ ಎಚ್ಚರಿಕೆ ನೀಡಿದರು. ‘ಈ ಕುರಿತು ಪ್ರಸ್ತಾಪಿಸಲು ರಾಹುಲ್‌ ಗಾಂಧಿ ಅವರಿಗೆ ಸ್ಪೀಕರ್‌ ಅನುಮತಿ ನಿರಾಕರಿಸಿದ್ದಾರೆ. ಅವರ ರೂಲಿಂಗ್‌ ಅನ್ನು ರಾಹುಲ್‌ ಪದೇ ಪದೇ ಉಲ್ಲಂಘಿಸಿದ್ದಾರೆ. ಈ ಮೂಲಕ ಅವರು ಪೀಠಕ್ಕೆ ಅಗೌರವ ತೋರಿದ್ದಾರೆ. ಸದನದ ನಿಯಮ ಪಾಲನೆ ವಿಷಯದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕರು ಯುವ ಸಂಸದರಿಗೆ ಮಾದರಿಯಾಗಿಲ್ಲ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಆರೋಪಿಸಿದರು.
‘ಪಲಾಯನ ಮಾಡಿದರು’
‘ಭೂಮಿಯನ್ನು ಕಳೆದುಕೊಂಡಿದ್ದೇವೋ ಇಲ್ಲವೋ ಎಂಬುದು ಬೇರೆಯದ್ದೇ ವಿಷಯ. ದೇಶದ ನಾಯಕರು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಪಲಾಯನ ಮಾಡಬಾರದು ಮತ್ತು ಅದನ್ನು ಮತ್ತೊಬ್ಬರ ಹೆಗಲ ಮೇಲೆ ಬಿಡಬಾರದು. ಆದರೆ ಮೋದಿ ಅವರು ಮಾಡಿದ್ದು ಅದನ್ನೇ’ ಎಂದು ರಾಹುಲ್‌ ಆರೋಪಿಸಿದರು. ಸೇನಾ ಮುಖ್ಯಸ್ಥರ ಈ ಪುಸ್ತಕ ಪ್ರಕಟಣೆಗೂ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದೂ ದೂರಿದರು.
ಅತ್ಯಂತ ಹಿರಿಯ ಸಚಿವರನ್ನು ನಿಯೋಜಿಸಿ ನಿಯಮಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಮತ್ತು ರಾಹುಲ್‌ ಅವರನ್ನು ಸುಮ್ಮನಿರಿಸಲು ಯತ್ನಿಸಲಾಗಿದೆ
– ಕೆ.ಸಿ.ವೇಣುಗೋಪಾಲ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ 
ಸ್ಪೀಕರ್‌ ತೀರ್ಪನ್ನು ಧಿಕ್ಕರಿಸುವ ಮೂಲಕ ರಾಹುಲ್‌ ಗಾಂಧಿ ಅವರು ತಪ್ಪನ್ನು ಪುನರಾವರ್ತಿಸಿ ಸದನದ ಸಮಯವನ್ನು ವ್ಯರ್ಥ ಮಾಡಿದರು
– ಕಿರಣ್‌ ರಿಜಿಜು, ಸಂಸದೀಯ ವ್ಯವಹಾರಗಳ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT