ನವದಾ: ಬಿಹಾರದಲ್ಲಿ ನಡೆಸಲಾಗುತ್ತಿರುವ ‘ಮತದಾರರ ಅಧಿಕಾರ ಯಾತ್ರೆ’ ಅಂಗವಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಮಹಾಮೈತ್ರಿಕೂಟದ ನಾಯಕರು ಸಂಚರಿಸುತ್ತಿದ್ದ ಜೀಪ್, ಪೊಲೀಸ್ ಸಿಬ್ಬಂದಿಯೊಬ್ಬರಿಗೆ ತಾಗಿದ ಘಟನೆ ಇಲ್ಲಿ ಮಂಗಳವಾರ ನಡೆದಿದೆ.

ಯಾತ್ರೆಯಲ್ಲಿ ಭಾರಿ ಜನಸಂದಣಿ ಇದ್ದ ಕಾರಣ ಈ ಘಟನೆ ಸಂಭವಿಸಿದ್ದು, ಪೊಲೀಸ್ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ. ನಾಯಕರು ಇದ್ದ ವಾಹನವು ಬಹಳ ನಿಧಾನವಾಗಿ ಚಲಿಸುತ್ತಿತ್ತು. ವಾಹನವು ಪೊಲೀಸ್ ಸಿಬ್ಬಂದಿಗೆ ತಗುಲುತ್ತಿದ್ದಂತೆಯೇ ಅಲ್ಲಿದ್ದ ಜನರು ಸವಾರನಿಗೆ ಎಚ್ಚರಿಸಿದರು. ಜನರೇ ಸಿಬ್ಬಂದಿಯನ್ನು ಎತ್ತಿ ನಿಲ್ಲಿಸಿದರು.

ಬಳಿಕ, ಜೀಪ್ನಲ್ಲಿದ್ದ ರಾಹುಲ್ ಆತನನ್ನು ತಮ್ಮ ವಾಹನದಲ್ಲಿ ಕೂರಿಸಿಕೊಂಡು, ಆರೋಗ್ಯ ವಿಚಾರಿಸಿದರು. ಕುಡಿಯಲು ನೀರನ್ನೂ ನೀಡಿದರು. ಯಾತ್ರೆ ಮುಂದೆ ಸಾಗಿದಾಗಲೂ ಪೊಲೀಸ್ ಸಿಬ್ಬಂದಿಯು ಜೀಪ್ನಲ್ಲಿಯೇ ಇದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.