ನವದೆಹಲಿ: ‘ದೇಶದಲ್ಲಿ ಗಿಗ್ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆ ಹಾಗೂ ಅವರ ದುಸ್ಥಿತಿ ಕುರಿತು ಕಾಂಗ್ರೆಸ್ ಗಮನ ಹರಿಸಿದೆ. ದೇಶದಲ್ಲಿ ಪಕ್ಷ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಈ ಕಾರ್ಮಿಕರ ಹಿತರಕ್ಷಣೆಗಾಗಿ ನೀತಿಗಳನ್ನು ರೂಪಿಸಲಾಗಿದೆ. ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟವು ಗಿಗ್ ಕಾರ್ಮಿಕರ ಹಿತರಕ್ಷಣೆಗಾಗಿ ಈ ನೀತಿಯನ್ನು ದೇಶವ್ಯಾಪಿ ಜಾರಿಗೆ ತರಲಿದೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಉಬರ್‌ನಲ್ಲಿ ಇತ್ತೀಚೆಗೆ ಅವರು ಕೈಗೊಂಡ ಪ್ರಯಾಣದ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಅವರು, ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
‘ಕಡಿಮೆ ಆದಾಯ ಹಾಗೂ ಹಣ ದುಬ್ಬರವು ದೇಶದ ಹಲವು ಜನರ ಬದುಕನ್ನು ದುಸ್ತರಗೊಳಿಸಿದೆ. ಇದರಿಂದ ಕ್ಯಾಬ್ ಚಾಲಕರು, ಡೆಲಿವರಿ ಏಜೆಂಟ್‌ಗಳನ್ನೂ ಒಳಗೊಂಡ ಗಿಗ್ ಕಾರ್ಮಿಕರೂ ಹೊರತಾಗಿಲ್ಲ. ನನ್ನ ಇತ್ತೀಚಿನ ಉಬರ್ ಪ್ರಯಾಣದಲ್ಲಿ ಚಾಲಕ ಸುನಿಲ್ ಉಪಾಧ್ಯಾಯ ಅವರೊಂದಿಗಿನ ಸಂವಾದದಲ್ಲಿ ಹಾಗೂ ನಂತರದಲ್ಲಿ ಅವರ ಕುಟುಂಬದೊಂದಿಗೆ ನಡೆಸಿದ ಚರ್ಚೆಯ ನಂತರ ಈ ಕಾರ್ಮಿಕ ವರ್ಗವು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪಟ್ಟಿ ಮಾಡಿದ್ದೇನೆ’ ಎಂದಿದ್ದಾರೆ.
आमदनी कम और महंगाई से निकलता दम - ये है भारत के gig workers की व्यथा!
— Rahul Gandhi (@RahulGandhi) August 19, 2024
सुनील उपाध्याय जी के साथ एक Uber यात्रा के दौरान चर्चा में और फिर उनके परिवार से मिल कर देश के Cab drivers और Delivery agents जैसे gig workers की समस्याओं का जायज़ा लिया।
'हैंड टू माउथ इनकम' में इनका गुज़ारा… pic.twitter.com/46y9o1Iul8
‘ಗಿಗ್ ಕಾರ್ಮಿಕರು ಗಳಿಸುವ ಹಣ ತುತ್ತು ಅನ್ನಕಷ್ಟೇ ಸಾಕಾಗುತ್ತಿದೆ. ಉಳಿತಾಯ ದೂರದ ಮಾತಾಯಿತು. ಇಷ್ಟೇ ಆದಾಯದಲ್ಲಿ ಇವರ ಕುಟುಂಬಕ್ಕೆ ಯಾವುದೇ ಆಧಾರವಿಲ್ಲದಂತಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳು ಉತ್ತಮ ನೀತಿಯನ್ನು ಜಾರಿಗೆ ತಂದಿವೆ. 'ಜನಬಂಧನ್’ ಎಂಬ ಯೋಜನೆಯನ್ನು ಇಂಡಿಯಾ ಮೈತ್ರಿಕೂಟವು ದೇಶದಾದ್ಯಂತ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲಿದೆ’ ಎಂದಿದ್ದಾರೆ.
ಒಟ್ಟು 11 ನಿಮಿಷಗಳ ವಿಡಿಯೊ ಇದಾಗಿದೆ. ಉಬರ್ ಆ್ಯಪ್ ಬಳಸಿ ರಾಹುಲ್ ಕ್ಯಾಬ್ ಕಾಯ್ದಿರಿಸಿದ್ದರು. ಉತ್ತರ ಪ್ರದೇಶದ ಇತಾಹ್ ಪ್ರದೇಶದವರಾದ ಕ್ಯಾಬ್ ಚಾಲಕನೊಂದಿಗೆ ಅವರು ಸಂಭಾಷಣೆ ನಡೆಸಿದ್ದಾರೆ. ಕ್ಯಾಬ್ ಇಳಿಯುವ ಮುನ್ನ ಚಾಲಕನಿಗೆ ಉಡುಗೊರೆ ನೀಡಿದ ರಾಹುಲ್, ಮಕ್ಕಳಿಗೆ ನೀಡುವಂತೆ ಹೇಳುತ್ತಾರೆ.
ನಂತರ ದೆಹಲಿಯ ಹೊಟೇಲ್ ಒಂದರಲ್ಲಿ ಕ್ಯಾಬ್ ಚಾಲಕ ಹಾಗೂ ಆತನ ಕುಟುಂಬದೊಂದಿಗೆ ರಾಹುಲ್ ಭೋಜನ ಸೇವಿಸಿ, ಸಮಾಲೋಚನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.