ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ವಿಧಾನಸಭೆಗೆ ನಾಳೆ ಮತದಾನ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ

Published 24 ನವೆಂಬರ್ 2023, 10:45 IST
Last Updated 24 ನವೆಂಬರ್ 2023, 10:45 IST
ಅಕ್ಷರ ಗಾತ್ರ

ಜೈಪುರ: ಐದು ವರ್ಷದ ಬಾಲಕಿ ಮೇಲೆ ಆಕೆಯ ಸಂಬಂಧಿಯೇ ಅತ್ಯಾಚಾರವೆಸಗಿರುವ ಪ್ರಕರಣ ರಾಜಸ್ಥಾನದ ಟೋಂಕ್‌ ಜಿಲ್ಲೆಯಲ್ಲಿ ವರದಿಯಾಗಿದೆ.

ಬುಧವಾರ (ನವೆಂಬರ್ 22ರಂದು) ರಾತ್ರಿ ಈ ಘಟನೆ ನಡೆದಿದೆ. ಮದುವೆ ಸಲುವಾಗಿ ಬಂದಿದ್ದ ಆರೋಪಿ ಶಿವರಾಜ್‌ ಬೈರ್ವಾ (22), ಬಾಲಕಿಯನ್ನು ಮೇಲ್ಛಾವಣಿಗೆ ಎಳೆದೊಯ್ದು ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಬಾಲಕಿ ಕೆಲಹೊತ್ತು ಮನೆಯಲ್ಲಿ ಕಾಣಿಸಿರಲಿಲ್ಲ. ಹುಡುಕಾಟ ನಡೆಸಿದ ‌ಕುಟುಂಬದವರಿಗೆ ಆಕೆ ಮೇಲ್ಛಾವಣಿಯಲ್ಲಿ ಕಾಣಿಸಿಕೊಂಡಿದ್ದಳು. ನಂತರ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಸಂತ್ರಸ್ತೆಯನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ.

'ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಬಾಲಕಿ ನೀಡಿರುವ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ' ಎಂದು ಟೋಂಕ್‌ ಎಸ್‌ಪಿ ರಾಜರ್ಶಿ ರಾಜ್‌ ವರ್ಮಾ ತಿಳಿಸಿದ್ದಾರೆ.

ಚುನಾವಣೆ ಹೊಸ್ತಿಲಲ್ಲಿ ಆಘಾತಕಾರಿ ಘಟನೆ
200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಗೆ ನಾಳೆ (ನವೆಂಬರ್‌ 25ರಂದು) ಮತದಾನ ನಡೆಯಲಿದ್ದು, ಡಿಸೆಂಬರ್‌ 3ರಂದು ಫಲಿತಾಂಶ ಹೊರಬೀಳಲಿದೆ. ಗುಜ್ಜಾರ್‌ ಸಮುದಾಯದ ಪ್ರಬಲ ನಾಯಕರಾಗಿರುವ ಸಚಿನ್‌ ಪೈಲಟ್‌ ಅವರು ಟೊಂಕ್‌ ಕ್ಷೇತ್ರದಿಂದಲೇ ಕಣಕ್ಕಿಳಿದಿದ್ದಾರೆ.

ಒಂದು ವೇಳೆ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೇರಿದರೆ ಪೈಲಟ್ ಅವರು ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಾಲಿ ಸಿಎಂ ಅಶೋಕ್‌ ಗೆಹಲೋತ್‌ ಅವರೊಂದಿಗೆ ಪೈಪೋಟಿ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಸಚಿನ್‌ ಕ್ಷೇತ್ರದಲ್ಲಿ ಚುನಾವಣೆ ಹೊಸ್ತಿಲಲ್ಲಿ ನಡೆದಿರುವ ಈ ಘಟನೆ ಆಘಾತಕಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT