ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲ್ಕತ್ತ | ಬಹುಕೋಟಿ ಪಡಿತರ ಹಗರಣ: ವಿಚಾರಣೆಗೆ ಹಾಜರಾದ ನಟಿ ಋತುಪರ್ಣ

Published 19 ಜೂನ್ 2024, 13:04 IST
Last Updated 19 ಜೂನ್ 2024, 13:04 IST
ಅಕ್ಷರ ಗಾತ್ರ

ಕೋಲ್ಕತ್ತ: ಪಡಿತರ ವಿತರಣೆಯಲ್ಲಿ ನಡೆದಿರುವ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಬಂಗಾಳಿ ನಟಿ ಋತುಪರ್ಣ ಸೇನ್‌ಗುಪ್ತಾ ಅವರು ಬುಧವಾರ ಜಾರಿ ನಿರ್ದೇಶನಾಲಯದ (ಇ.ಡಿ.) ಮುಂದೆ ವಿಚಾರಣೆಗೆ ಹಾಜರಾದರು. 

‘ನಗರದಲ್ಲಿರುವ ಇ.ಡಿ ಕಚೇರಿಗೆ ಬಂದ ಋತುಪರ್ಣ ಅವರಿಗೆ, ಬ್ಯಾಂಕ್‌ ಖಾತೆಗಳಲ್ಲಿ ನಡೆದಿರುವ ಹಣ ವರ್ಗಾವಣೆಗೆ ಸಂಬಂಧಿಸಿದ ಕೆಲವು ‘ನಿರ್ದಿಷ್ಟ’ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಲಾಯಿತು’ ಎಂದು ಅಧಿಕಾರಿಯೊಬ್ಬರು ಹೇಳಿದರು. 

‘ನಾವು ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳುವುದಿತ್ತು. ಇತರ ವಿವರಗಳನ್ನೂ ಪರಿಶೀಲನೆ ನಡೆಸಲಿದ್ದೇವೆ. ನಿರ್ದಿಷ್ಟವಾಗಿ ಅವರ ಬ್ಯಾಂಕ್‌ ಖಾತೆಗಳಲ್ಲಿ ನಡೆದಿರುವ ಕೆಲವು ವ್ಯವಹಾರಗಳಿಗೆ ಸಂಬಂಧಿಸಿದಂತೆ ‍ಪರಿಶೀಲಿಸಲಿದ್ದೇವೆ. ಹಣದ ಮೂಲ ಮತ್ತು ಮತ್ತು ಯಾರ ಖಾತೆಗೆ ವರ್ಗಾವಣೆಯಾಗದೆ ಎಂಬುದನ್ನು ನಾವು ತಿಳಿಯಬೇಕಿದೆ’ ಎಂದು ತನಿಖಾಧಿಕಾರಿ ‘ಪಿಟಿಐ’ಗೆ ತಿಳಿಸಿದರು. 

ಜೂನ್‌ 5ರಂದು ವಿಚಾರಣೆಗೆ ಹಾಜರಾಗುವಂತೆ ಕೇಂದ್ರ ತನಿಖಾ ಸಂಸ್ಥೆ ಋತುಪರ್ಣ ಅವರಿಗೆ ಈ ಹಿಂದೆ ಸೂಚಿಸಿತ್ತು. ಆದರೆ, ಅಮೆರಿಕದಲ್ಲಿದ್ದ ಅವರು, ವಿಚಾರಣೆಗೆ ಹಾಜರಾಗಲು ಬೇರೆ ದಿನ ನಿಗದಿ ಪಡಿಸುವಂತೆ ಮನವಿ ಮಾಡಿದ್ದರು. 

2019ರಲ್ಲಿ ರೋಸ್‌ ವ್ಯಾಲಿ ಚಿಟ್‌ ಫಂಡ್‌ ಹಗರಣಕ್ಕೆ ಸಂಬಂಧಿಸಿದಂತೆಯೂ ಇ.ಡಿ. ಅಧಿಕಾರಿಗಳು ಋತುಪರ್ಣ ಅವರನ್ನು ವಿಚಾರಣೆ ಮಾಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT