ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಪತ್ನಿಯನ್ನು ಆಯ್ಕೆ ಮಾಡಿರುವುದಕ್ಕಾಗಿ ಕ್ರಿಕೆಟಿಗ ರವೀಂದ್ರ ಜಡೇಜ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಮರ್ಪಿಸಿದ್ದಾರೆ ಹಾಗೂ ಪತ್ನಿ ರಿವಬಾಗೆ ಶುಭ ಕೋರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಜಡೇಜ, ‘ನನ್ನ ಪತ್ನಿ ವಿಧಾನಸಭಾ ಟಿಕೆಟ್ ಪಡೆದಿರುವುದಕ್ಕೆ ಅಭಿನಂದನೆಗಳು. ಈ ನಿಟ್ಟಿನಲ್ಲಿ ಪತ್ನಿಯ ಪ್ರಯತ್ನ ಮತ್ತು ಕಠಿಣ ಪರಿಶ್ರಮಕ್ಕೆ ಹೆಮ್ಮೆ ಪಡುತ್ತೇನೆ. ಸಮಾಜದ ಅಭಿವೃದ್ಧಿಗಾಗಿ ನಿನ್ನ ಕೆಲಸ ಮುಂದುವರಿಯಲಿ’ ಎಂದಿದ್ದಾರೆ.

ಪತ್ನಿಯ ಸಾಮರ್ಥ್ಯ ಗುರುತಿಸಿ ಟಿಕೆಟ್ ನೀಡಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಜಡೇಜ ಧನ್ಯವಾದ ಸಮರ್ಪಿಸಿದ್ದಾರೆ.

ಬಿಜೆಪಿ ಇಂದು 160 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಜಾಮನಗರ್ ಉತ್ತರ ಕ್ಷೇತ್ರದಿಂದ ಜಡೇಜ ಪತ್ನಿಗೆ ಟಿಕೆಟ್ ನೀಡಲಾಗಿದೆ. ಹಾಲಿ ಶಾಸಕ ಧಮೇಂದ್ರಸಿನ್ಹ ಜಡೇಜ ಅವರಿಗೆ ಈ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಲಾಗಿದೆ.

ಟಿ20 ವಿಶ್ವಕಪ್ ಆಡಬೇಕಿದ್ದ ಜಡೇಜ, ಮೊಣಕಾಲು ನೋವಿನಿಂದಾಗಿ ಸರಣಿಯಿಂದ ಹೊರಗುಳಿದಿದ್ದರು. ರಿವಬಾ ಜಡೇಜ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ಕಾಂಗ್ರೆಸ್ ಮುಖಂಡ ಹರಿಸಿಂಗ್ ಸೋಲಂಕಿ ಸಂಬಂಧಿ. 2016ರಲ್ಲಿ ರವೀಂದ್ರ ಜಡೇಜಾ ಅವರನ್ನು ವಿವಾಹವಾದ ರಿವಬಾ, ಜಾಮ್‌ನಗರ–ಸೌರಾಷ್ಟ್ರ ಕ್ಷೇತ್ರದ ಸಕ್ರಿಯ ರಾಜಕಾರಣಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.