ಲಂಡನ್ ಮೂಲದ ಉನ್ನತ ಶಿಕ್ಷಣ ಸಂಸ್ಥೆಗಳ ವಿಶ್ಲೇಷಣಾ ಸಂಸ್ಥೆ ಕ್ವಾಕೆರಲಿ ಸೈಮಂಡ್ಸ್ (ಕ್ಯೂಎಸ್) ಪ್ರತಿವರ್ಷವೂ ಶಿಕ್ಷಣ ಸಂಸ್ಥೆಯ ಹಿನ್ನೆಲೆ, ಬೋಧಕ– ವಿದ್ಯಾರ್ಥಿಗಳ ಅನುಪಾತ, ಸಂಶೋಧನೆಯಿಂದಾದ ಪರಿಣಾಮ, ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವೈವಿಧ್ಯ ಹಾಗೂ ಪದವೀಧರರಿಗೆ ಉದ್ಯೋಗವಕಾಶ ಆಧರಿಸಿ ಶ್ರೇಯಾಂಕ ನೀಡುತ್ತದೆ.
ಕ್ಯೂಎಸ್ ಶ್ರೇಯಾಂಕ ಪಟ್ಟಿಯು ಭಾರತದ ಶಿಕ್ಷಣ ಕ್ಷೇತ್ರದ ಪಾಲಿಗೆ ಶುಭ ಸುದ್ದಿಯಾಗಿದೆ. ದೇಶದ ಯುವಕರ ಏಳ್ಗೆಗಾಗಿ ಸಂಶೋಧನೆ ಹಾಗೂ ನಾವೀನ್ಯತೆ ವ್ಯವಸ್ಥೆ ರೂಪಿಸುವಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ
ನರೇಂದ್ರ ಮೋದಿ, ಪ್ರಧಾನಿ
ನರೇಂದ್ರ ಮೋದಿ ಪ್ರಧಾನಿ
ಶ್ರೇಯಾಂಕದಲ್ಲಿ ಭಾರತದ ಸಾಧನೆಯು ಶಿಕ್ಷಣ ಕ್ಷೇತ್ರದಲ್ಲಿ ದೇಶದ ಸಾಧನೆಯ ಉತ್ತುಂಗಕ್ಕೇರಿದೆ
ಧರ್ಮೇಂದ್ರ ಪ್ರಧಾನ್, ಕೇಂದ್ರ ಶಿಕ್ಷಣ ಸಚಿವ
ಧರ್ಮೇಂದ್ರ ಪ್ರಧಾನ್ ಶಿಕ್ಷಣ ಸಚಿವ
ಭಾರತವು ಜಾಗತಿಕ ಉನ್ನತ ಶಿಕ್ಷಣ ನಕಾಶೆಯನ್ನು ಮತ್ತೆ ಬರೆಯುತ್ತಿದೆ. ಈ ವರ್ಷದ ಆವೃತ್ತಿಯಲ್ಲಿ ಬೇರೆ ಯಾವ ದೇಶಗಳೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ