ಶನಿವಾರ, 19 ಜುಲೈ 2025
×
ADVERTISEMENT
ADVERTISEMENT

ಸೋಫಿಯಾ ಬಗ್ಗೆ ಹೇಳಿಕೆ | ಸಚಿವರಿಗೆ ಜವಾಬ್ದಾರಿ ಇರಬೇಕು: ಸುಪ್ರೀಂ ಕೋರ್ಟ್‌ ತರಾಟೆ

ಸೋಫಿಯಾ ಬಗ್ಗೆ ಹೇಳಿಕೆ: ಮಧ್ಯಪ್ರದೇಶದ ಸಚಿವ ವಿಜಯ್‌ ಶಾಗೆ ಸುಪ್ರೀಂಕೋರ್ಟ್‌ ತರಾಟೆ
Published : 15 ಮೇ 2025, 16:05 IST
Last Updated : 15 ಮೇ 2025, 19:33 IST
ಫಾಲೋ ಮಾಡಿ
Comments
ನಾಲ್ಕು ತಾಸಿನಲ್ಲಿ ಎಫ್‌ಐಆರ್‌ ದಾಖಲಿಸಿ ಎಂದು ಹೈಕೋರ್ಟ್‌ ಆದೇಶಿಸಿದರೆ, ಪೊಲೀಸರು ಆರು ತಾಸು ತೆಗೆದುಕೊಂಡರು. ಅಲ್ಲಿಗೆ, ವಿಜಯ್‌ ಅವರನ್ನು ವಜಾಗೊಳಿಸುವುದನ್ನು ಬಿಟ್ಟು ಬಿಜೆಪಿಯು ಅವರನ್ನು ರಕ್ಷಿಸಲು ನಿಂತಿದೆ ಎಂದಾಯಿತು
ಜಿತು ಪಟ್ವಾರಿ, ಮಧ್ಯಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ
ವಿಜಯ್‌ ಅವರು ಬಿಜೆಪಿಯ ಟ್ರೋಲ್‌ ಪಡೆಯಂತಿದ್ದಾರೆ. ಇವರ ಹೇಳಿಕೆ ಸರಿ ಇದೆ ಎಂದು ಪ್ರಧಾನಿ ಮೋದಿ ಅವರಿಗೆ ಅನ್ನಿಸುತ್ತದೆಯೇ? ಎಲ್ಲ ವಿಷಯದಲ್ಲೂ ಹಿಂದೂ–ಮುಸ್ಲಿಂ ವಿಚಾರವನ್ನು ತೂರಿಸಲು ಬಿಜೆಪಿ ನಾಯಕರ ಮಧ್ಯೆ ಸ್ಪರ್ಧೆ ಇದೆ
ದಿಗ್ವಿಜಯ ಸಿಂಗ್‌, ಕಾಂಗ್ರೆಸ್‌ ನಾಯಕ
ಆಪರೇಷನ್‌ ಸಿಂಧೂರದ ಚಹರೆಯಾಗಿದ್ದ ಮುಸ್ಲಿಂ ಸಮುದಾಯಕ್ಕೆ ಸೇರಿದ ಕರ್ನಲ್‌ ಸೋಫಿಯಾ ಅವರ ಬಗ್ಗೆ ವಿಜಯ್‌ ಅವರು ನೀಡಿದ ಹೇಳಿಕೆ ಖಂಡನೀಯ. ಹೈಕೋರ್ಟ್‌ ಆದೇಶದಂತೆ ಈಗ ಎಫ್‌ಐಆರ್‌ ದಾಖಲಿಸಲಾಗಿದೆ. ಬಿಜೆಪಿಯು ಈಗ ಯಾವ ಕ್ರಮ ಕೈಗೊಳ್ಳಲಿದೆ ಎಂದು ದೇಶದ ಕಾಯುತ್ತಿದೆ
ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ
ಯಾವ ಶಾಗಳೂ (ಶಾ ಎನ್ನುವ ಹೆಸರು ಇಟ್ಟುಕೊಂಡವರು) ದೇಶಪ್ರೇಮಿಗಳಲ್ಲ. ನಾನು ಶಾ ಎಂದು ಒತ್ತಿ ಹೇಳುತ್ತಿದ್ದೇನೆ. ಇವರೆಲ್ಲರೂ ಬೆನ್ನ ಹಿಂದೆ ದಾಳಿ ಮಾಡುವವರೇ
ಸಂಜಯ್‌ ರಾವುತ್‌, ಶಿವಸೇನಾ (ಉದ್ಧವ್‌ ಬಣ) ಸಂಸದ
ರಾವುತ್‌ ಅವರ ಹೇಳಿಕೆಯು ನೀಚತನದ ಮತ್ತು ಜಾತಿವಾದಿ ಹೇಳಿಕೆಯಾಗಿದೆ. ಅವರು ಇಡೀ ಶಾ ಸಮುದಾಯವನ್ನೇ ಅವಮಾನಿಸಿದ್ದಾರೆ
ಪ್ರದೀಪ್‌ ಭಂಡಾರಿ, ಬಿಜೆಪಿ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT