ಪತಿಯಿಂದ ವಿಚ್ಛೇದನ ಪಡೆದ ನಂತರ ಮಹಿಳೆಯೊಬ್ಬರು, ಐವಿಎಫ್ ಪ್ರಕ್ರಿಯೆಯಿಂದ ಗರ್ಭಧರಿಸಿ, ಮಗುವಿಗೆ ಜನ್ಮ ನೀಡಿದ್ದರು. ಜನನ ಪ್ರಮಾಣ ಪತ್ರ ಪಡೆಯುವ ವೇಳೆ, ಆ ಅರ್ಜಿಯಲ್ಲಿ ತಂದೆಯ ವಿವರವನ್ನು ಕೇಳಲಾಗಿತ್ತು. ಇಂಥ ಪ್ರಕರಣಗಳಲ್ಲಿ ಮಗುವಿನ ತಂದೆಯ ಹೆಸರು ವಿವರ ಬಹಿರಂಗಪಡಿಸುವುದು ತಾಯಿಯ ಘನತೆ, ಸ್ವಾತಂತ್ರ್ಯ ಮತ್ತು ಗೌಪ್ಯತೆಗೆ ಧಕ್ಕೆಯುಂಟಾಗುತ್ತದೆ ಎಂದು ಪ್ರತಿಪಾದಿಸಿದ ಮಹಿಳೆ ಹೈಕೋರ್ಟ್ ಮೊರೆ ಹೋಗಿದ್ದರು.