ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ: ಲಾಕರ್‌ಗಳಲ್ಲಿ ₹500 ಕೋಟಿ ಹಣ, 50 ಕೆ.ಜಿ ಚಿನ್ನ: ಬಿಜೆಪಿಯ ಮೀನಾ ಆರೋಪ

Published 13 ಅಕ್ಟೋಬರ್ 2023, 10:27 IST
Last Updated 13 ಅಕ್ಟೋಬರ್ 2023, 10:27 IST
ಅಕ್ಷರ ಗಾತ್ರ

ಜೈಪುರ: ಇಲ್ಲಿನ 100 ಖಾಸಗಿ ಲಾಕರ್‌ಗಳಲ್ಲಿ ₹500 ಕೋಟಿ ಕಪ್ಪುಹಣ ಮತ್ತು 50 ಕೆ.ಜಿ ಚಿನ್ನವನ್ನು ಇರಿಸಲಾಗಿದೆ ಎಂದು ಬಿಜೆಪಿಯ ರಾಜ್ಯಸಭಾ ಸಂಸದ ಕಿರೋಡಿ ಮೀನಾ ಅವರು ಆರೋಪಿಸಿದ್ದು, ಲಾಕರ್‌ಗಳನ್ನು ತೆರೆಯುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 100 ಲಾಕರ್‌ಗಳಲ್ಲಿ ಸುಮಾರು ₹500 ಕೋಟಿ ಕಪ್ಪುಹಣ ಮತ್ತು 50 ಕೆ.ಜಿಯಷ್ಟು ಚಿನ್ನವಿದೆ. ಪೊಲೀಸರು ಬಂದು ಲಾಕರ್‌ಗಳನ್ನು ತೆರೆಯುವವರೆಗೂ ನಾನು ಗೇಟ್‌ನಲ್ಲಿಯೇ ಕುಳಿತುಕೊಳ್ಳುತ್ತೇನೆ ಎಂದು ಹೇಳಿದರು.

‘ನಾನು ಈಗ ಹೆಸರುಗಳನ್ನು ಬಹಿರಂಗಪಡಿಸಿದರೆ, ರಾಜಕೀಯ ಒತ್ತಡವನ್ನು ಹೇರಲಾಗುತ್ತದೆ. ಇದರಿಂದಾಗಿ ಲಾಕರ್‌ಗಳನ್ನು ತೆರೆಯಲಾಗುವುದಿಲ್ಲ’ ಎಂದು ತಿಳಿಸಿದರು.

ಸವಾಯಿ ಮಾಧೋಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿರುವ ಮೀನಾ, ಲಾಕರ್‌ಗಳಿರುವ ಕಟ್ಟಡದ ಸ್ಥಳಕ್ಕೆ ಮಾಧ್ಯಮದವರು ತಮ್ಮೊಂದಿಗೆ ಬರುವಂತೆ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ನಂತರ ಮೀನಾ ಅವರು ಲಾಕರ್‌ ಇರುವ ಕಟ್ಟಡದ ಸ್ಥಳಕ್ಕೆ ತೆರಳಿದರು. ಆದರೆ, ಲಾಕರ್‌ಗಳು ಯಾರಿಗೆ ಸೇರಿವೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT