ಪ್ಯಾರಿಸ್: ಅಂತರರಾಷ್ಟ್ರೀಯ ಫುಟ್‌ಬಾಲ್‌ನ ಜಾಗತಿಕ ಮಂಡಳಿಯಾಗಿರುವ ಫಿಫಾ, ರಷ್ಯಾವನ್ನು ಒಕ್ಕೂಟದಿಂದ ಹೊರಹಾಕಿದೆ. ಈ ವರ್ಷ ಕತಾರ್‌ನಲ್ಲಿ ಆಯೋಜನೆಯಾಗಲಿರುವ ವಿಶ್ವಕಪ್ ಟೂರ್ನಿಗೆ ನಡೆಯುವ ಅರ್ಹತಾ ಪಂದ್ಯಗಳಿಂದಲೂರಷ್ಯಾದ ತಂಡಗಳನ್ನು ಬಹಿಷ್ಕರಿಸಲಾಗಿದೆ.

ವಿವಿಧ ದೇಶಗಳ ಫುಟ್‌ಬಾಲ್ ಸಂಸ್ಥೆಗಳು, ಉಕ್ರೇನ್‌ನಲ್ಲಿಅತಿಕ್ರಮಣ ನಡೆಸುತ್ತಿರುವ ರಷ್ಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಫಿಫಾ ಅನ್ನು ಒತ್ತಾಯಿಸಿದ್ದವು. ಹೀಗಾಗಿ, ಯುರೋಪ್ ಫುಟ್‌ಬಾಲ್ ಒಕ್ಕೂಟ ಆಡಳಿತ ಮಂಡಳಿಯ ಸಮನ್ವಯತೆಯೊಂದಿಗೆ ಫಿಫಾ ಸೋಮವಾರ ಈ ನಿರ್ಧಾರ ಕೈಗೊಂಡಿದೆ. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಲು ಅವಕಾಶ ನಿರಾಕರಿಸಿ, ಆ ದೇಶದ (ರಷ್ಯಾದ) ಕ್ಲಬ್‌ಗಳಿಗೂ ನಿರ್ಬಂಧ ಹೇರಲಾಗಿದೆ.

ಮುಂದಿನ ಆದೇಶದ ವರೆಗೆ ರಷ್ಯಾ ಮೇಲಿನ ನಿರ್ಬಂಧ ಮುಂದುವರಿಯಲಿದೆ ಎಂದು ಫಿಫಾ ಮತ್ತು ಅದರ ಯುರೋಪಿಯನ್ ಫುಟ್‌ಬಾಲ್ ಒಕ್ಕೂಟದ ಪ್ರತಿನಿಧಿ ತಿಳಿಸಿದ್ದಾರೆ.

Live Updates:ರಷ್ಯಾ–ಉಕ್ರೇನ್ ಸಂಘರ್ಷ | 5 ಲಕ್ಷಕ್ಕೂ ಅಧಿಕ ಜನರು ಉಕ್ರೇನ್ ತೊರೆದಿದ್ದಾರೆ- ವಿಶ್ವಸಂಸ್ಥೆ Live

'ಫುಟ್‌ಬಾಲ್ ಇದೀಗ ಸಂಪೂರ್ಣವಾಗಿ ಒಗ್ಗೂಡಿದೆ. ಉಕ್ರೇನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗಾಗಿ ಒಗ್ಗಟ್ಟು ಪ್ರದರ್ಶಿಸಲಿದೆ' ಎಂದು ಫಿಫಾ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.