ಪತ್ತಂತಿಟ್ಟ (ಕೇರಳ): ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನಕ್ಕೆ ಸ್ಥಳದಲ್ಲೇ ಬುಕಿಂಗ್ ಮಾಡಲು ದಿನವೊಂದಕ್ಕೆ 5 ಸಾವಿರ ಜನರಿಗಷ್ಟೇ ಅವಕಾಶ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಗುರುವಾರ ಪ್ರಕಟಿಸಿದೆ.

ಕೇರಳ ಹೈಕೋರ್ಟ್ ನಿರ್ದೇಶನದ ಮೇರೆಗ ಸ್ಥಳದಲ್ಲೇ ದರ್ಶನಕ್ಕೆ ಬುಕಿಂಗ್ ಮಾಡುವ ಮಿತಿಯನ್ನು ಕಡಿತಗೊಳಿಸಲಾಗಿದೆ ಎಂದು ಟಿಡಿಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
.ಶಬರಿಮಲೆಯಲ್ಲಿ ಜನದಟ್ಟಣೆ: 48 ಗಂಟೆಯಲ್ಲಿ 2 ಲಕ್ಷ ಭಕ್ತರ ಭೇಟಿ; ಮಹಿಳೆ ಸಾವು.
ನೀಲಕ್ಕಲ್ ಮತ್ತು ವಂಡಿಪೆರಿಯಾರ್ ಕೇಂದ್ರಗಳಲ್ಲಿ ಮಾತ್ರ ಸ್ಥಳದಲ್ಲೇ ಬುಕಿಂಗ್ ಲಭ್ಯವಿರುತ್ತದೆ. ಪಂಪಾ, ಎರುಮೇಲಿ ಮತ್ತು ಚೆಂಗನ್ನೂರಿನಲ್ಲಿ ಈ ಸೌಲಭ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನ. 24ರವರೆಗೆ ನಿರ್ಬಂಧ ಜಾರಿಯಲ್ಲಿರುತ್ತದೆ. ಸಾಧ್ಯವಾದಷ್ಟು ಭಕ್ತರು ವರ್ಚುವಲ್ ಕ್ಯೂನಲ್ಲಿ ಬುಕಿಂಗ್ ಮಾಡಿಕೊಳ್ಳಿ ಎಂದು ಟಿಡಿಬಿ ಒತ್ತಾಯಿಸಿದೆ.
.Sabarimala: ಬಾಗಿಲು ತೆರೆದ ಶಬರಿಮಲೆ ದೇಗುಲ.
ನ.17ರಂದು ದೇಗುಲದ ಬಾಗಿಲು ತೆರೆದ 48 ಗಂಟೆಯೊಳಗೆ ಸುಮಾರು ಎರಡು ಲಕ್ಷ ಯಾತ್ರಿಕರು ಆಗಮಿಸಿದ್ದ ಕಾರಣ ಜನದಟ್ಟಣೆ ಉಂಟಾಗಿತ್ತು. ಈ ಕುರಿತು ಕೇರಳ ಹೈಕೋರ್ಟ್ನ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ಮತ್ತು ಕೆ.ವಿ ಜಯಕುಮಾರ್ ಬುಧವಾರ ದೇವಾಲಯದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

ಮಂಡಲ– ಮಕರವಿಳಕ್ಕು ಋತುವಿನಲ್ಲಿ ಪ್ರತಿದಿನ ಒಂದು ಲಕ್ಷ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿತ್ತು. ಹೀಗಿದ್ದರೂ, ಈ ಹಿಂದಿನ ಮಾರ್ಗಸೂಚಿಗಳನ್ನು ಏಕೆ ಪಾಲನೆ ಮಾಡಿಲ್ಲ. ಜನದಟ್ಟಣೆಯನ್ನು ನಿಭಾಯಿಸಲು ಏಕೆ ಮುಂಚಿತವಾಗಿ ತಯಾರಿ ನಡೆಸಿಕೊಂಡಿಲ್ಲ’ ಎಂದು ನ್ಯಾಯಾಲಯವು ಟಿಡಿಬಿ ಪ್ರಶ್ನಿಸಿತ್ತು.
.Sabarimala | ಶಬರಿಮಲೆ ದೇವಾಲಯದಲ್ಲಿ ಜನದಟ್ಟಣೆ: ಹೈಕೋರ್ಟ್ ತರಾಟೆ.ಶಬರಿಮಲೆ: ರಾಜ್ಯದ ಯಾತ್ರಿಗಳಿಗೆ ಭದ್ರತೆ ಕೋರಿ ಕೇರಳ ಸರ್ಕಾರಕ್ಕೆ ಪತ್ರ.ಶಬರಿಮಲೆ: ಸರತಿಯಲ್ಲಿ ಲಕ್ಷಾಂತರ ಭಕ್ತರು, ನೀರು ಸಿಗದೆ ಪರದಾಟ .ಶಬರಿಮಲೆ ಯಾತ್ರೆ ಆರಂಭ: ಮೂಗಿನೊಳಗೆ ನೀರು ಹೋಗದಂತೆ ಎಚ್ಚರವಹಿಸಲು ಸರ್ಕಾರದ ಸೂಚನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.