ಹೈದರಾಬಾದ್: ಜನರ ಸುರಕ್ಷತೆಗಿಂತ ಸಿನಿಮಾ ಪ್ರಚಾರ ಹೆಚ್ಚು ಮುಖ್ಯವಲ್ಲ. ಇದನ್ನು ಚಿತ್ರರಂಗದವರು ಸೇರಿದಂತೆ ಎಲ್ಲರೂ ಅರ್ಥಮಾಡಿಕೊಳ್ಳಬೇಕು ಮತ್ತು ಅದರಂತೆಯೇ ನಡೆದುಕೊಳ್ಳಬೇಕೆಂದು ತೆಲಂಗಾಣದ ಡಿಜಿಪಿ ಜಿತೇಂದರ್ ಭಾನುವಾರ ಹೇಳಿದ್ದಾರೆ.

ಪೊಲೀಸರು ಯಾವುದೇ ವ್ಯಕ್ತಿಯ ವಿರುದ್ಧ ವೈಯಕ್ತಿಕ ಅಭಿಪ್ರಾಯಗಳನ್ನು ಹೊಂದಿರುವುದಿಲ್ಲ. ಆದರೆ ನಾಗರಿಕರಿಗೆ ಎಲ್ಲರೂ ಜವಾಬ್ದಾರರಾಗಿರಬೇಕು ಎಂದು 'ಪುಷ್ಪಾ-2' ಚಿತ್ರದ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.
.ಪ್ರಧಾನಿ ಮೋದಿಗೆ ಕುವೈತ್ನ ಅತ್ಯುನ್ನತ ನಾಗರಿಕ ಗೌರವ.Bihar Election 2025: ಮೋದಿ, ನಿತೀಶ್ ನಾಯಕತ್ವದಲ್ಲೇ ಸ್ಪರ್ಧೆ: ಡಿಸಿಎಂ ಚೌಧರಿ.
ಸಿನಿಮಾಗಳಲ್ಲಿ ಅವರು ನಾಯಕರು. ಆದರೆ ಸಮಾಜದ ಸಮಸ್ಯೆಗಳನ್ನು ಅವರು ಅರ್ಥಮಾಡಿಕೊಳ್ಳಬೇಕು. ಜನರ ಸುರಕ್ಷತೆಗಿಂತ ಸಿನಿಮಾ ಪ್ರಚಾರ ಹೆಚ್ಚು ಮುಖ್ಯವಲ್ಲ. ಇಂತಹ ಘಟನೆಗಳು ನಡೆಯಬಾರದು. ನಾಗರಿಕರ ಸುರಕ್ಷತೆ ಮತ್ತು ಅವರ ಭದ್ರತೆಯೇ ಮೊದಲ ಆದ್ಯತೆಯಾಗಿರಬೇಕೆಂದು ಜಿತೇಂದರ್ ತಿಳಿಸಿದ್ದಾರೆ.

'ಪುಷ್ಪಾ-2' ಚಿತ್ರದ ಪ್ರದರ್ಶನದ ವೇಳೆ ನೂಕುನುಗ್ಗಲು ಉಂಟಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಘಟನೆಯಲ್ಲಿ ಆಕೆಯ ಎಂಟು ವರ್ಷದ ಮಗ ಗಾಯಗೊಂಡಿದ್ದರು. ಈ ಪ್ರಕರಣ ಸಂಬಂಧ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಬಳಿಕ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
.Pushpa-2 | ಸಿನಿಮಾ ನೋಡಲು ಹೋದವರಿಗೆ ಕೆಮ್ಮು, ವಾಂತಿ.Pushpa–2 ಸಿನಿಮಾ ವಿಮರ್ಶೆ: ಅದ್ಧೂರಿತನವೇ ‘ಪುಷ್ಪ’ನ ಜೀವಾಳ .Pushpa 2 The Rule Trailer: ಪುಷ್ಪ ಅಂದ್ರೆ ಫೈರ್ ಅಲ್ಲ! ಮತ್ತೇನು?.ಪುಷ್ಪ–2: ಕಾಲ್ತುಳಿತ– ಗಾಯಗೊಂಡಿದ್ದ ಬಾಲಕನ ಭೇಟಿಯಾಗಿ ಸಾಂತ್ವನ ಹೇಳಿದ ಸುಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.