ನವದೆಹಲಿ: ದೇಶದಲ್ಲಿ ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಕಡಿವಾಣ ಹಾಕುವ ಕ್ರಮಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಸ್ವಯಂಪ್ರೇರಿತವಾಗಿ ನಿರ್ಧರಿಸಿತು.

ವಿಶೇಷ ತನಿಖಾ ತಂಡಗಳಿಗೆ ಇಂಥ ಕೃತ್ಯಗಳ ತನಿಖೆಯನ್ನು ಒಪ್ಪಿಸುವುದು ಹಾಗೂ ಪ್ರಕರಣಗಳ ವಿಚಾರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ಕೋರ್ಟ್ಗಳನ್ನು ಸ್ಥಾಪಿಸುವ ಕ್ರಮಗಳನ್ನು ಕುರಿತು ಸುಪ್ರೀಂ ಕೋರ್ಟ್ ಚಿಂತನೆ ನಡೆಸಿದೆ.

ಇದಕ್ಕೆ ಪೂರಕವಾಗಿ ಮಾರ್ಗದರ್ಶಿಸೂತ್ರಗಳನ್ನು ರಚಿಸಲು ಹಿರಿಯ ವಕೀಲ ವಿ. ಗಿರಿ ಅವರನ್ನು ನ್ಯಾಯಾಲಯದ ಸಹಾಯಕರಾಗಿ (ಅಮಿಕಸ್ ಕ್ಯೂರಿ) ಆಗಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಮತ್ತು ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ, ಅನಿರುದ್ಧ ಬೋಸ್ ಅವರಿದ್ದ ನ್ಯಾಯಪೀಠವು ನೇಮಕ ಮಾಡಿತು.

ಪತ್ರಿಕಾ ವರದಿಯ ಆಧಾರದಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿದ ಕೋರ್ಟ್, ಈ ಸಂಬಂಧ ವರದಿ ಸಲ್ಲಿಸುವಂತೆ ಹೈಕೋರ್ಟ್ಗಳಿಗೂ ಸೂಚಿಸಿತು. ಇಂಥ ಕೃತ್ಯಗಳ ವಿರುದ್ಧ ಸಮಗ್ರ ಮತ್ತು ಸ್ಪಷ್ಟವಾದ ರಾಷ್ಟ್ರೀಯ ನಿಲುವು ರೂಪಿಸುವ ನಿಟ್ಟಿನಲ್ಲಿ ಆದೇಶ ಹೊರಡಿಸಲಾಗುವುದು ಎಂದು ಸ್ಪಷ್ಟಪಡಿಸಿತು.

ದೇಶದಾದ್ಯಂತ ಈ ವರ್ಷದ ಜ.1ರಿಂದ ಜೂನ್ 30ರವರೆಗೂ ಒಟ್ಟು 24,212 ಎಫ್ಐಆರ್ಗಳು ದಾಖಲಾಗಿವೆ. ಇದುವರೆಗೆ ಕೇವಲ 911 ಪ್ರಕರಣ ಪ್ರರಣಗಳಷ್ಟೇ ಇತ್ಯರ್ಥಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.