ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವರ್ಗಾವಣೆ: ನ್ಯಾ.ಶಮೀಮ್‌ ಮನವಿ ತಿರಸ್ಕರಿಸಿದ ಕೊಲಿಜಿಯಂ

Published : 30 ಆಗಸ್ಟ್ 2024, 15:43 IST
Last Updated : 30 ಆಗಸ್ಟ್ 2024, 15:43 IST
ಫಾಲೋ ಮಾಡಿ
Comments

ನವದೆಹಲಿ: ಮದ್ರಾಸ್‌ ಹೈಕೋರ್ಟ್‌ಗೆ ತಮ್ಮನ್ನು ವರ್ಗಾವಣೆ ಮಾಡಿರುವ ನಿರ್ಧಾರವನ್ನು ಮರು‍ಪರಿಶೀಲಿಸಬೇಕು ಎಂದು ಅಲಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಶಮೀಮ್ ಅಹ್ಮದ್‌ ಅವರ ಕೋರಿಕೆಯನ್ನು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶುಕ್ರವಾರ ತಳ್ಳಿ ಹಾಕಿದೆ.

‘ಉತ್ತಮ ಆಡಳಿತ ಉದ್ದೇಶದಿಂದ ನಿಮ್ಮನ್ನು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿ ನ್ಯಾಯಮೂರ್ತಿ ಶಮೀಮ್‌ ಅಹ್ಮದ್‌ ಸಲ್ಲಿಸಿರುವ ಮನವಿಯು ಪರಿಗಣಿಸಲು ಯೋಗ್ಯವಲ್ಲ ಎಂಬುದಾಗಿ ನಿರ್ಣಯಿಸಲಾಗಿದೆ’ ಎಂದು ಕೊಲಿಜಿಯಂ ಹೇಳಿದೆ. 

 ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ, ಬಿ.ಆರ್‌.ಗವಾಯಿ, ಸೂರ್ಯಕಾಂತ್‌ ಹಾಗೂ ಹೃಷಿಕೇಶ್‌ ರಾಯ್‌ ಅವರಿದ್ದ ಕೊಲಿಜಿಯಂ, ನ್ಯಾಯಮೂರ್ತಿ ಶಮೀಮ್‌ ಅಹ್ಮದ್‌ ಅವರನ್ನು ವರ್ಗಾವಣೆ ಮಾಡುವ ಕುರಿತ ನಿರ್ಣಯ ಕೈಗೊಂಡಿತ್ತು. ತನ್ನ ಈ ನಿರ್ಣಯವನ್ನು ಆ.21ರಂದು ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT