ಹೈದರಾಬಾದ್: ತೆಲಂಗಾಣದ ಎಲ್ಲಾ ಶಾಲೆಗಳಲ್ಲಿ 9 ಮತ್ತು 10ನೇ ತರಗತಿಗಳು ಫೆಬ್ರುವರಿ 1ರಿಂದ ಪುನರಾರಂಭವಾಗಲಿವೆ. ಈ ತರಗತಿಗಳು ಮೇ 26ರವರೆಗೆ ನಡೆಯಲಿವೆ.

‘ತೆಲಂಗಾಣದಲ್ಲಿ ಮೇ 17ರಿಂದ 26ರವರೆಗೆಎಸ್ಎಸ್ಸಿ (10ನೇ ತರಗತಿ) ಪರೀಕ್ಷೆಗಳಿಗೆ ದಿನಾಂಕ ನಿಗದಿಪಡಿಸಲಾಗಿದೆ’ ಎಂದು ತೆಲಂಗಾಣ ಶಾಲಾ ಶಿಕ್ಷಣ ಇಲಾಖೆಯು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

‘ಈ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕನಿಷ್ಠ ಹಾಜರಾತಿಯಲ್ಲಿ ವಿನಾಯಿತಿ ನೀಡಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೈದರಾಬಾದ್ ಮತ್ತು ಸಿಕಂದರಾಬಾದ್ನಲ್ಲಿ ಶಾಲೆಗಳು ಬೆಳಿಗ್ಗೆ 8.45ರಿಂದ ಸಂಜೆ 4ರ ತನಕ ಕಾರ್ಯ ನಿರ್ವಹಿಸಲಿವೆ. ಉಳಿದ ಜಿಲ್ಲೆಗಳಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 4.45 ತನಕಶಾಲೆಗಳು ತೆರದಿರಲಿವೆ.

10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 10 ರಿಂದ 11 ಗಂಟೆಯ ತನಕ ಆನ್ಲೈನ್ ತರಗತಿ ನಡೆಯಲಿವೆ. 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಜೆ 4 ರಿಂದ 5 ಗಂಟೆಯ ತನಕ ಆನ್ಲೈನ್ ತರಗತಿಗಳೂ ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.