ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಸಾಗಿಸುವಾಗ ಮೇಲ್ಸೇತುವೆಗೆ ಸಿಲುಕಿದ ಟ್ರಕ್; ತೆಗೆಯಲು ಹರಸಾಹಸ

Published 30 ಡಿಸೆಂಬರ್ 2023, 13:48 IST
Last Updated 30 ಡಿಸೆಂಬರ್ 2023, 13:48 IST
ಅಕ್ಷರ ಗಾತ್ರ

ಮೋತಿಹಾರಿ: ಹಳೆಯ ವಿಮಾನ ಸಾಗಿಸುತ್ತಿದ್ದ ಸಂದರ್ಭದಲ್ಲಿ ಚಾಲಕನ ಗ್ರಹಿಕೆಗೂ ಮೀರಿ ಟ್ರಕ್ ಒಂದು ಮೇಲ್ಸೇತುಗೆ ಸಿಲುಕಿದ ಘಟನೆ ಬಿಹಾರದ ಮೋತಿಹಾರಿಯಲ್ಲಿ ನಡೆದಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಿಹಾರದ ಲಖನೌದಿಂದ ಅಸ್ಸಾಂಗೆ ರಸ್ತೆ ಮಾರ್ಗವಾಗಿ ಈ ಹಳೆಯ ವಿಮಾನವನ್ನು ಟ್ರಕ್‌ನಲ್ಲಿ ಸಾಗಿಸಲಾಗಿತ್ತು.

ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿಯ ಪಿಪರಕೋಠಿ ಬಳಿ ಶುಕ್ರವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಈ ಘಟನೆ ನಡೆದಿತ್ತು.ಇದರಿಂದಾಗಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ನಂತರ ಪೊಲೀಸರು ವಿಮಾನ ಸಹಿತ ಟ್ರಕ್ ಅನ್ನು ಸ್ಥಳದಿಂದ ತೆರವುಗೊಳಿಸಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಿಮಾನ ಸಾಗಿಸುವಾಗ ಮೇಲ್ಸೇತುವೆಗೆ ಸಿಲುಕಿದ ಟ್ರಕ್

ವಿಮಾನ ಸಾಗಿಸುವಾಗ ಮೇಲ್ಸೇತುವೆಗೆ ಸಿಲುಕಿದ ಟ್ರಕ್

(ಪಿಟಿಐ ಚಿತ್ರ)

'ಪಿಪರಕೋಠಿ ಮೇಲ್ಸೇತುವೆ ಕೆಳಗೆ ವಿಮಾನದ ಹಿಂಭಾಗವು ಸಿಲುಕಿಕೊಂಡಿತ್ತು. ಸ್ಥಳೀಯರ ನೆರವಿನೊಂದಿಗೆ ವಿಮಾನ ಹಾಗೂ ಟ್ರಕ್ ತೆರವುಗೊಳಿಸಲು ಸಾಧ್ಯವಾಗಿದೆ. ಕೆಲವು ತಾಸಿನ ಬಳಿಕ ಸಂಚಾರ ಮರುಸ್ಥಾಪಿಸಲಾಯಿತು' ಎಂದು ಮೋತಿಹಾರಿ ಸಹಾಯಕ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ರಾಜ್ ತಿಳಿಸಿದ್ದಾರೆ.

ಟ್ರಕ್ ಚಾಲಕ ಮೇಲ್ಸೇತುವೆಯ ಎತ್ತರವನ್ನು ತಪ್ಪಾಗಿ ಗ್ರಹಿಸಿರುವುದೇ ವಿಮಾನ ಸಿಲುಕಲು ಕಾರಣವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದಕ್ಕೆ ಸಮಾನವಾಗಿ 2022ರಲ್ಲಿ ನಡೆದಿದ್ದ ಘಟನೆಯಲ್ಲಿ, ಕೊಚ್ಚಿಯಿಂದ ಹೈದರಾಬಾದ್‌ಗೆ ಟ್ರಕ್ ಮೂಲಕ ಸಾಗಿಸುತ್ತಿದ್ದ ಹಳೆಯ ವಿಮಾನ ಮೇಲ್ಸೇತುವೆ ಅಡಿಯಲ್ಲಿ ಸಿಲುಕಿತ್ತು.

ವಿಮಾನ ಸಾಗಿಸುವಾಗ ಮೇಲ್ಸೇತುವೆಗೆ ಸಿಲುಕಿದ ಟ್ರಕ್

ವಿಮಾನ ಸಾಗಿಸುವಾಗ ಮೇಲ್ಸೇತುವೆಗೆ ಸಿಲುಕಿದ ಟ್ರಕ್

(ಪಿಟಿಐ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT