ನವದೆಹಲಿ: ಆಗ್ರಾದ ತಾಜ್‌ಮಹಲ್ ಪ್ರವೇಶಿಸುತ್ತಿದ್ದ ಅಯೋಧ್ಯೆಯ ಜಗದ್ಗುರು ಪರಮಹಂಸ ದಾಸ್ ಸ್ವಾಮೀಜಿ ಅವರನ್ನು ಪೊಲೀಸರು ಮಂಗಳವಾರ ತಡೆದಿದ್ದಾರೆ.

ಅಕ್ಷಯ ತೃತೀಯ ದಿನದಂದು ಮಂತ್ರಗಳೊಂದಿಗೆ ತಾಜ್ ಮಹಲ್ ಅನ್ನು ಶುದ್ಧೀಕರಿಸುವುದಾಗಿ ಅವರು ಕೆಲ ದಿನಗಳ ಹಿಂದೆ ಘೋಷಿಸಿದ್ದರು.

ಈ ಹಿಂದೆ, ಏಪ್ರಿಲ್ 26 ರಂದು 'ಬ್ರಹ್ಮದಂಡ'ದೊಂದಿಗೆ ತಾಜ್‌ಮಹಲ್ ಆವರಣ ಪ್ರವೇಶಿಸಲು ಪ್ರಯತ್ನಿಸಿದ ಅವರನ್ನು ಪೊಲೀಸರು ತಡೆದಿದ್ದರು.

ತಮ್ಮನ್ನು ತಡೆದ ಪೊಲೀಸರ ಕ್ರಮಕ್ಕೆ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು. ಇತರ ಸಮುದಾಯದವರನ್ನು ಒಳಗೆ ಬಿಡುತ್ತಿರುವಾಗ ನನ್ನನ್ನು ಯಾಕೆ ಬಿಡುತ್ತಿಲ್ಲ. ನಾನು ಕೇಸರಿ ಬಟ್ಟೆ ಧರಿಸಿದ್ದರಿಂದ ತಡೆಯಲಾಗಿದೆ. ‘ನನ್ನನ್ನು ಅವಮಾನಿಸಿದ್ದಾರೆ. ಹಾಗಿದ್ದರೆ, ನನ್ನನ್ನು ಆಹ್ವಾನಿಸಿದ್ದು ಏಕೆ? ಎಂದು ಅವರು ಪ್ರಶ್ನೆ ಮಾಡಿದರು.

ಈ ಮಧ್ಯೆ, ತಾಜ್ ಮಹಲ್ ಒಳಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವವರೆಗೆ ಆಹಾರ ಮತ್ತು ನೀರನ್ನು ತ್ಯಜಿಸುವುದಾಗಿ ಸ್ವಾಮೀಜಿ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.