ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ತೀರ್ಥಯಾತ್ರೆ : ವಿಮಾನದಲ್ಲಿ ಪ್ರಯಾಗರಾಜ್‌ಗೆ ಹೊರಟ 32 ಹಿರಿಯ ನಾಗರಿಕರು

Published 21 ಮೇ 2023, 6:35 IST
Last Updated 21 ಮೇ 2023, 6:35 IST
ಅಕ್ಷರ ಗಾತ್ರ

ಭೋ‍ಪಾಲ್‌ : ಪ್ರಯಾಗ್‌ರಾಜ್‌ಗೆ ತೀರ್ಥಯಾತ್ರೆ ಕೈಗೊಂಡ 32 ಹಿರಿಯ ನಾಗರಿಕರಿಗೆ ಮಧ್ಯಪ್ರದೇಶದ ಸರ್ಕಾರ ಉಚಿತ ವಿಮಾನ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಿದೆ. ಭಾನುವಾರ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಯಾತ್ರಿಕರನ್ನು ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟರು.

’ಮುಖ್ಯಮಂತ್ರಿ ತೀರ್ಥ-ದರ್ಶನ ಯೋಜನೆಯಡಿಯಲ್ಲಿ ಆಯ್ಕೆಯಾದ 32 ಫಲಾನುಭವಿಗಳಿಗೆ ವಿಮಾನದಲ್ಲಿ ಉಚಿತವಾಗಿ ತೀರ್ಥಯಾತ್ರೆಗೆ ಹೋಗುವ ಅವಕಾಶ ಕಲ್ಪಿಸಲಾಗಿದೆ. 24 ಪುರುಷರು ಮತ್ತು 8 ಮಹಿಳೆಯರು ವಿಮಾನದಲ್ಲಿ ತೀರ್ಥಯಾತ್ರೆಗೆ ಹೋಗುವ ಅವಕಾಶ ಪಡೆದುಕೊಂಡಿದ್ದಾರೆ. ಯಾತ್ರಿಕರು ಇದೇ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಇಲ್ಲಿಯವರೆಗೆ 7.82 ಲಕ್ಷ ಹಿರಿಯ ನಾಗರಿಕರು ತೀರ್ಥಯಾತ್ರೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಹಿರಿಯ ನಾಗರಿಕರ ತೀರ್ಥಯಾತ್ರೆಗಾಗಿ ವಿಮಾನ ಪ್ರಯಾಣ ಸೌಲಭ್ಯವನ್ನು ಒದಗಿಸಿದ ಮೊದಲ ರಾಜ್ಯ ಮಧ್ಯಪ್ರದೇಶವಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2012ರಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆ ಜಾರಿಗೆ ತಂದಿತ್ತು. ಈ ಯೋಜನೆಯಡಿ ಆಯ್ಕೆಯಾದ ಯಾತ್ರಿಕರಿಗೆ ವಿಶೇಷ ರೈಲುಗಳ ಮೂಲಕ ಉಚಿತವಾಗಿ ತೀರ್ಥ ಸ್ಥಳಗಳನ್ನು ನೋಡುವ ಅವಕಾಶ ಕಲ್ಪಿಸಲಾಗಿತ್ತು. ಇತ್ತೀಚೆಗೆ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಈ ಯೋಜನೆಯಡಿ ವಿಮಾನದ ಮೂಲಕ ತೀರ್ಥಯಾತ್ರೆಗೆ ಹೋಗುವ ಅವಕಾಶ ಕಲ್ಪಿಸಲಾಗವುದು ಎಂದು ಘೋಷಿಸಿದ್ದರು.

’ಮೊದಲ ಹಂತದ ವಿಮಾನಯಾನ ಸೌಲಭ್ಯದಡಿ ಜುಲೈವರೆಗೆ ಈ ಸೌಲಭ್ಯ ಮುಂದುವರಿಸಲಾಗುತ್ತದೆ. ರಾಜ್ಯದ ವಿವಿಧ ವಿಮಾನ ನಿಲ್ದಾಣಗಳಿಂದ ಬೇರೆ ಬೇರೆ ಬ್ಯಾಚ್‌ಗಳಲ್ಲಿ ಹಿರಿಯ ಯಾತ್ರಿಕರು ತೀರ್ಥಕ್ಷೇತ್ರಗಳಿಗೆ ಪ್ರಯಾಣಿಸಲಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT