ಮಾಸ್ಕೊ: ಭಾರತದಲ್ಲಿ ಸ್ಫುಟ್ನಿಕ್–ವಿ ಲಸಿಕೆಯ ತಯಾರಿಕೆಯನ್ನು ಸೆಪ್ಟೆಂಬರ್‌ನಿಂದ ಆರಂಭಿಸುವುದಾಗಿ ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಹಾಗೂ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮಂಗಳವಾರ ಪ್ರಕಟಿಸಿವೆ.

ಭಾರತದಲ್ಲಿ ಪ್ರತಿ ವರ್ಷ ಲಸಿಕೆಯ 30 ಕೋಟಿಗೂ ಹೆಚ್ಚು ಡೋಸ್‌ಗಳನ್ನು ತಯಾರಿಸುವ ಯೋಜನೆ ಇದ್ದು, ಮೊದಲ ಬ್ಯಾಚ್‌ನಲ್ಲಿ ತಯಾರಿಸುವ ಲಸಿಕೆಯನ್ನು ಭಾರತದ ಅಗತ್ಯಕ್ಕೆ ತೆಗೆದಿರಿಸಲಾಗುವುದು ಎಂದು ಆರ್‌ಡಿಐಎಫ್‌ನ ಸಿಇಒ ಕಿರಿಲ್ ಡಿಮಿಟ್ರಿವ್ ತಿಳಿಸಿದ್ದಾರೆ.

ಓದಿ:ದೇಶದ 50 ನಗರಗಳಲ್ಲಿ ಸ್ಪುಟ್ನಿಕ್–ವಿ ಲಸಿಕಾ ಕಾರ್ಯಕ್ರಮ: ಡಾ.ರೆಡ್ಡೀಸ್ ಲ್ಯಾಬ್

ಭಾರತದ ಅಗತ್ಯವನ್ನು ಪೂರೈಸಿದ ಮೇಲೆ ತೃತೀಯ ರಾಷ್ಟ್ರಗಳಿಗೆ ಒಂದಿಷ್ಟು ಡೋಸ್ ರಫ್ತು ಮಾಡುವ ಸಾಧ್ಯತೆ ಬಗ್ಗೆ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆದಿರುವುದಾಗಿ ಅವರು ಹೇಳಿದ್ದಾರೆ.

ಮುಂಬರುವ ತಿಂಗಳಲ್ಲಿ ಸ್ಫುಟ್ನಿಕ್ ವಿ ಲಸಿಕೆಯ ತಯಾರಿಕೆ ಆರಂಭ ಆಗಲಿದ್ದು, ಪ್ರಾಯೋಗಿಕ ಲಸಿಕೆ ಸೆಪ್ಟೆಂಬರ್‌ನಲ್ಲಿ ಲಭ್ಯವಾಗಲಿದೆ ಎಂದು ಸೀರಂನ ಸಿಇಒ ಅದಾರ್ ಪೂನಾವಾಲಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.