ರಾಂಚಿ(ಜಾರ್ಖಂಡ್): ಭಾರತ ಉಪಖಂಡದಲ್ಲಿ ಕಾರ್ಯಾಚರಿಸುತ್ತಿರುವ ಅಲ್-ಖೈದಾ ಸಂಘಟನೆಯೊಂದಿಗೆ (AQIS) ಸಂಪರ್ಕ ಹೊಂದಿದ್ದ 7 ಜನರನ್ನು ಜಾರ್ಖಂಡ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಗುರುವಾರ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಇಂದು ಮುಂಜಾನೆ ರಾಂಚಿ, ಹಜಾರಿಬಾಗ್ ಮತ್ತು ಲೋಹರ್ದಗಾ ಸೇರಿದಂತೆ ರಾಜ್ಯದ 14 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
'ದಾಳಿ ಮುಂದುವರಿದಿದ್ದು, ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಸುಮಾರು 7 ಜನರನ್ನು ಈವರೆಗೆ ಬಂಧಿಸಲಾಗಿದೆ. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲಾಗುತ್ತಿದೆ' ಎಂದು ಪೊಲೀಸ್ ವರಿಷ್ಠಾಧಿಕಾರಿ ರಿಷಬ್ ಝಾ ಪಿಟಿಐಗೆ ತಿಳಿಸಿದ್ದಾರೆ.