ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಲೆಸ್ಟೀನ್‌ ಜನರ ಪರ ನಿಲ್ಲಿ: ಪ್ರಧಾನಿಗೆ ಒವೈಸಿ ಆಗ್ರಹ

Published 15 ಅಕ್ಟೋಬರ್ 2023, 20:31 IST
Last Updated 15 ಅಕ್ಟೋಬರ್ 2023, 20:31 IST
ಅಕ್ಷರ ಗಾತ್ರ

ಹೈದರಾಬಾದ್: ಇಸ್ರೇಲ್‌ ಮತ್ತು ಹಮಾಸ್‌ ಬಂಡುಕೋರರ ನಡುವಿನ ಸಂಘರ್ಷದಿಂದ ತತ್ತರಿಸಿರುವ ಪ್ಯಾಲೆಸ್ಟೀನಿಯನ್ನರ ಪರ ನಿಲ್ಲಬೇಕು ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಒವೈಸಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.

ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ಯಾಲೆಸ್ಟೀನ್‌ ವಿಚಾರವು ಮುಸ್ಲಿಮರಿಗೆ ಮಾತ್ರ ಸಂಬಂಧಿಸಿದ್ದಲ್ಲ ಮನುಷ್ಯತ್ವಕ್ಕೆ ಸಂಬಂಧಿಸಿದ್ದು ಎಂದು ಅವರು ಹೇಳಿದ್ದಾರೆ. ನ್ಯಾಯ ಬಯಸುವ ಪ್ರತಿಯೊಬ್ಬರಿಗೂ ಸಂಬಂಧಿಸಿದ ವಿಚಾರ ಕೂಡ ಹೌದು ಎಂದಿದ್ದಾರೆ.

ಗಾಜಾದಲ್ಲಿ ನಡೆಯುತ್ತಿರುವುದು ‘ಜನಾಂಗೀಯ ಶುದ್ಧೀಕರಣ’ ಎಂದಿರುವ ಅವರು, ಇಸ್ರೇಲ್‌ ನಡೆಸುತ್ತಿರುವ ಯುದ್ಧಾಪರಾಧಗಳನ್ನು ಭಾರತ ಸರ್ಕಾರ ಖಂಡಿಸಬೇಕು ಎಂದು ಹೇಳಿದ್ದಾರೆ.

ಗಾಜಾದಲ್ಲಿರುವವರನ್ನು ಇಲ್ಲವಾಗಿಸಲು ಇಸ್ರೇಲ್‌ ಬಯಸುತ್ತಿದೆ. ಆದರೆ ಮಾನವ ಹಕ್ಕುಗಳ ಕುರಿತು ಮಾತನಾಡುವವರು ಈ ವಿಚಾರವಾಗಿ ಮೌನವಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT