ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಬಾರಿ ಸಂಸದ, ಬಿಜೆಡಿಯ ಸ್ಥಾಪಕ ಸದಸ್ಯ ಭರ್ತೃಹರಿ ಬಿಜೆಪಿ ಸೇರ್ಪಡೆ

Published 28 ಮಾರ್ಚ್ 2024, 12:21 IST
Last Updated 28 ಮಾರ್ಚ್ 2024, 12:21 IST
ಅಕ್ಷರ ಗಾತ್ರ

ನವದೆಹಲಿ: ಬಿಜು ಜನತಾದಳದ (ಬಿಜೆಡಿ) ಸ್ಥಾಪಕ ಸದಸ್ಯರಲ್ಲಿ ಓರ್ವರೂ, ಕಟಕ್‌ನಿಂದ ಆರು ಬಾರಿಯ ಸಂಸದರೂ ಆಗಿರುವ ಭರ್ತೃಹರಿ ಮಹತಾಬ್‌ ಅವರು ಗುರುವಾರ ಇಲ್ಲಿ ಬಿಜೆಪಿಗೆ ಸೇರಿದರು.

67 ವರ್ಷದ ಭರ್ತುಹರಿ, ಇಲ್ಲಿಯ ಪ‍ಕ್ಷದ ಮುಖ್ಯಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಧರ್ಮೇಂದ್ರ ಪ್ರಧಾನ್‌ ಸಹಿತ ಬಿಜೆಪಿಯ ಹಿರಿಯ ನಾಯಕರು ಈ ವೇಳೆ ಹಾಜರಿದ್ದರು.

ಭರ್ತೃಹರಿಯವರ ಜತೆಗೆ, ಬಿಜೆಡಿಯ ಮಾಜಿ ಸಂಸದ ಸಿದ್ದಾಂತ ಮಹಪಾತ್ರ ಹಾಗೂ ಪದ್ಮಶ್ರಿ ಪುರಸ್ಕೃತ ಸಂತಾಲಿ ಭಾಷೆಯ ಸಾಹಿತಿ ದಮಯಂತು ಬೇಷರ ಅವರೂ ಬಿಜೆಪಿಗೆ ಸೇರಿದರು.

ಬಿಜೆಪಿಗೆ ಸೇರಿದ ಬಳಿಕ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಭರ್ತೃಹರಿ ಮಹತಾಬ್‌, ‘ಒಡಿಶಾದ ಅಭಿವೃದ್ಧಿ ಹಾಗೂ ಪ್ರಗತಿಗಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿಯವರ ಶಕ್ತಿ, ಗೃಹ ಸಚಿವ ಅಮಿತ್‌ ಶಾ ಅವರ ನಂಬಿಕೆ, ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಪ್ರೇರಣೆಯಿಂದಾಗಿ ನಮಗೆ ಮುಂದುವರಿಯಲು ಸಾಧ್ಯವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಒಡಿಶಾ ಬದಲಾವಣೆ ಕಾಣಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT