ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಟ್ವೀಟ್ ಮಾಡಿರುವ ಅವರು, ‘ ಪ್ರತಿ ಮಗುವಿಗೆ ಸಂತೋಷಕರ ಬಾಲ್ಯ ಮತ್ತು ಶಿಕ್ಷಣ ಪಡೆಯುವ ಹಕ್ಕಿದೆ. ಈ ದಿನದಂದು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ. ನಾವೆಲ್ಲರೂ ಜತೆಯಾಗಿ ಮಕ್ಕಳಿಗೆ ಉತ್ತಮ ಬಾಲ್ಯವನ್ನು ಕೊಡಬಹುದು. ಉತ್ತಮ ಬಾಲ್ಯವನ್ನು ಹೊಂದುವ ಅರ್ಹತೆ ಎಲ್ಲಾ ಮಕ್ಕಳಿಗೂ ಇದೆ’ ಎಂದು ಟ್ವೀಟ್ ಮಾಡಿದ್ದಾರೆ.