ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಜನತೆಗೆಏಳು ತಿಂಗಳ ಬಳಿಕ ಸಾಮಾಜಿಕ ಜಾಲತಾಣಗಳ ಬಳಕೆಗೆ ಅವಕಾಶ ದೊರೆತಿದೆ.ಮಾ.17ರವರೆಗೆ 2ಜಿ ಮೊಬೈಲ್ ಇಂಟರ್‌ನೆಟ್ ಮತ್ತು ಫಿಕ್ಸ್ಡ್‌ಲೈನ್ ಇಂಟರ್‌ನೆಟ್ ಸಂಪರ್ಕ ಹೊಂದಿರುವವರು ಸಾಮಾಜಿಕ ಜಾಲತಾಣದ ವೆಬ್‌ಸೈಟ್‌ಗಳನ್ನು ಬಳಸಬಹುದಾಗಿದೆ.

ಆಗಸ್ಟ್ 5ರಂದು ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರ ರದ್ದುಗೊಳಿಸಿ, ರಾಜ್ಯವನ್ನು ವಿಭಜನೆ ಮಾಡಿ ಎರಡು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ ಬಳಿಕಈ ಭಾಗದಲ್ಲಿ ಸಂವಹನ ನಿರ್ಬಂಧ ಹೇರಲಾಗಿತ್ತು.

ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಅವಲೋಕಿಸಿ, ಕೇಂದ್ರ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಆದೇಶ ಹೊರಡಿಸಿದ್ದು, ‘ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಕೆಲ ನಿರ್ಬಂಧ ವಿಧಿಸಿ ಇಂಟರ್‌ನೆಟ್ ಸೌಲಭ್ಯ ನೀಡಲು ಆದೇಶಿಸಲಾಗಿದೆ.

ಇಂಟರ್‌ನೆಟ್ ವೇಗ 2ಜಿ ಇರಲಿದೆ. ಪೋಸ್ಟ್‌ಪೇಯ್ಡ್ ಸಿಮ್ ಕಾರ್ಡ್ ಬಳಕೆದಾರರಿಗೆ ಇಂಟರ್‌ನೆಟ್ ಸೇವೆ ಮುಂದುವರಿಯಲಿದೆ. ಸಿಮ್ ಕಾರ್ಡ್‌ಗಳ ಪರಿಶೀಲನೆ ಹೊರತು ಪ್ರೀಪೇಯ್ಡ್ ಬಳಕೆದಾರರಿಗೆ ಈ ಸೇವೆ ಲಭ್ಯವಿರುವುದಿಲ್ಲ’ ಎಂದು ಉಲ್ಲೇಖಿಸಲಾಗಿದೆ.

ಇಂಟರ್‌ನೆಟ್ ಬಳಸುವ ಅವಕಾಶವನ್ನು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದ ಬಳಿಕ ಮೊಬೈಲ್ ಹಾಗೂ ಇಂಟರ್‌ನೆಟ್ ಬಳಕೆ ಮೇಲಿನ ನಿರ್ಬಂಧವನ್ನು ಕ್ರಮೇಣವಾಗಿ ತೆರವು ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.