ಮೀರತ್: ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದ ಭಾರತೀಯ ಸೇನೆಯ ಯೋಧನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಟೋಲ್ ಆಪರೇಟರ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ₹20 ಲಕ್ಷ ದಂಡ ವಿಧಿಸಿದೆ. ಘಟನೆಯನ್ನು ಭಾರತೀಯ ಸೇನೆ ತೀವ್ರವಾಗಿ ಖಂಡಿಸಿದೆ.

ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದ ಯೋಧ ಕಪಿಲ್ ಮೇಲೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿರುವ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿದ್ದರು. ಸರೂರ್ಪುರ ಪ್ರದೇಶದ ಭುನಿ ಟೋಲ್ ಪ್ಲಾಜಾದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಹಲ್ಲೆ ನಡೆಸಿದ ಆರು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಶ್ರೀನಗರದ ಗೋಟ್ಕಾ ಗ್ರಾಮದಲ್ಲಿ ನಿಯೋಜನೆಗೊಂಡಿದ್ದ ಕಪಿಲ್, ಕರ್ತವ್ಯಕ್ಕೆ ಹಾಜರಾಗಲು ದೆಹಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ಟೋಲ್ನಲ್ಲಿ ಉದ್ದನೆಯ ಸಾಲು ಇದ್ದ ಕಾರಣ, ಬೇಗನೆ ತೆರವುಗೊಳಿಸುವಂತೆ ಟೋಲ್ ಸಿಬ್ಬಂದಿಗೆ ಕಪಿಲ್ ಹೇಳಿದರು. ನಂತರ ತಮಗೆ ತಡವಾಗುತ್ತಿದೆ ಎಂದು ಮುಂದೆ ಸಾಗಿದರು. ಇದರಿಂದ ಬೂಮ್ ಬ್ಯಾರಿಯರ್ ಮುರಿಯಿತು. ಇದು ಕಪಿಲ್ ಮತ್ತು ಟೋಲ್ ಸಿಬ್ಬಂದಿ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಇದು ವಿಕೋಪಕ್ಕೆ ಹೋದ ಪರಿಣಾಮ, ಟೋಲ್ ಸಿಬ್ಬಂದಿ ಕಪಿಲ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
.ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದ ಯೋಧನ ಮೇಲೆ ಹಲ್ಲೆ: ಟೋಲ್ ಸಿಬ್ಬಂದಿ ಬಂಧನ.
ಘಟನೆ ಸಂಬಂಧ ಎಷ್ಟು ಜನರನ್ನು ಬಂಧಿಸಲಾಗಿದೆ?

ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿತು. ಕಪಿಲ್ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಮತ್ತು ಸಲ್ಲಿಕೆಯಾದ ದೂರು ಆಗ್ರಹಿಸಿ ಸಚಿನ್, ವಿಜಯ್, ಅನುಜ್, ಅಂಕಿತ್, ಸುರೇಶ್ ರಾಣಾ ಮತ್ತು ಅಂಕಿತ್ ಶರ್ಮಾ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಕಪಿಲ್ ಮತ್ತು ಅವರೊಂದಿಗೆ ಇದ್ದವರನ್ನು ಕಂಬಕ್ಕೆ ಕಟ್ಟಿಹಾಕಿ ದೊಣ್ಣೆಯಿಂದ ಇವರು ಹಲ್ಲೆ ನಡೆಸಿದ್ದರು. ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಉಳಿದವರನ್ನು ಬಂಧಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಗ್ರಾಮೀಣ ಭಾಗದ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

ಟೋಲ್ ವಿರುದ್ಧ NHAI ಕೈಗೊಂಡ ಕ್ರಮಗಳೇನು?

ಘಟನೆಯ ಮಾಹಿತಿ ಪಡೆದ ಹೆದ್ದಾರಿ ಪ್ರಾಧಿಕಾರ, ಪ್ರಕರಣ ನಡೆದ ಧರಮ್ ಸಿಂಗ್ ಮಾಲೀಕತ್ವದ ಟೋಲ್ ಏಜೆನ್ಸಿಗೆ ಸೋಮವಾರ ₹20 ಲಕ್ಷ ದಂಡ ವಿಧಿಸಿದೆ. ತನ್ನ ಒಪ್ಪಂದದ ಘೋರ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೆದ್ದಾರಿ ಪ್ರಾಧಿಕಾರ, ಏಜೆನ್ಸಿಗೆ ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಲು ಮತ್ತು ಭವಿಷ್ಯದಲ್ಲಿ ಯಾವುದೇ ಟೆಂಡರ್ನಲ್ಲಿ ಭಾಗವಹಿಸದಂತೆ ನಿಷೇಧ ಹೇರಲು ನಿರ್ಧರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಟೋಲ್ ಸಿಬ್ಬಂದಿಯ ಈ ವರ್ತನೆ ಖಂಡನೀಯ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರ ಸುರಕ್ಷತೆಗೆ ಪ್ರಾಧಿಕಾರ ಹಾಗೂ ಟೋಲ್ ಸಿಬ್ಬಂದಿ ಬದ್ಧರಾಗಿರಬೇಕು’ ಎಂದು ಪ್ರಾಧಿಕಾರ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಯೋಧನೆ ಮೇಲೆ ಹಲ್ಲೆಗೆ ಭಾರತೀಯ ಸೇನೆ ಹೇಳಿದ್ದೇನು?

ಘಟನೆಯನ್ನು ಖಂಡಿಸಿರುವ ಭಾರತೀಯ ಸೇನೆಯ ಸೆಂಟ್ರಲ್ ಕಮಾಂಡ್, ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹೇಳಿಕೆ ಪ್ರಕಟಿಸಿದೆ. ‘ಕರ್ತವ್ಯದಲ್ಲಿರುವ ಸೈನಿಕರ ಮೇಲೆ ಇಂಥ ಹಲ್ಲೆಯನ್ನು ಸೇನೆ ಬಲವಾಗಿ ಖಂಡಿಸುತ್ತದೆ. ಈ ಕುರಿತು ಉತ್ತರ ಪ್ರದೇಶ ಪೊಲೀಸ್ನ ಉನ್ನತ ಅಧಿಕಾರಿಗೆ ಪತ್ರ ಬರೆದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಲಾಗುವುದು’ ಎಂದಿದೆ.

‘ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಕೊಲೆ ಯತ್ನ, ಅಕ್ರಮವಾಗಿ ಗುಂಪು ಸೇರಿರುವುದು ಮತ್ತು ದರೋಡೆ ಯತ್ನವನ್ನು ದಾಖಲಿಸಲಾಗಿದೆ. ಎನ್ಎಚ್ಎಐ ಜತೆ ಭಾರತೀಯ ಸೇನೆಯೂ ತನ್ನ ಪ್ರತಿಭಟನೆ ದಾಖಲಿಸಿದೆ. ಈ ಘಟನೆಯ ತಾರ್ತಿಕ ಅಂತ್ಯಕ್ಕೆ ಭಾರತೀಯ ಸೇನೆ ಬದ್ಧವಾಗಿದೆ’ ಎಂದು ಹೇಳಲಾಗಿದೆ.

ಪ್ರತಿಭಟನೆ ನಡೆಸಿದ ಸಾರ್ವಜನಿಕರ ಆಗ್ರಹವೇನು?

ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಸಾರ್ವಜನಿಕ ವಲಯದಿಂದಲೂ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಟೋಲ್ನ ಸುತ್ತಮುತ್ತಲಿನ ಹಲವು ಗ್ರಾಮಗಳ ನಾಗರಿಕರು ಸೇರಿ ಪ್ರತಿಭಟನೆ ನಡೆಸಿದ್ದಾರೆ. ಟೋಲ್ ನಿರ್ವಹಿಸುತ್ತಿರುವ ಕಂಪನಿಗೆ ನೀಡಿರುವ ಗುತ್ತಿಗೆ ರದ್ಧತಿಗೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.