ಸಮಾಲಖಾ, ಹರಿಯಾಣ: ‘ದೇಶದ ಒಳಗೆ ಮತ್ತು ಹೊರಗಡೆ ಹಿಂದುತ್ವ ಚಿಂತನೆ ವಿರೋಧಿಸುತ್ತಿರುವ ಕೆಲವು ಶಕ್ತಿಗಳು ಸಮಾಜದಲ್ಲಿ ಅರಾಜಕತೆ ಮೂಡಿಸಲು ಸಂಚು ನಡೆಸುತ್ತಿವೆ. ಅಂತಹ ಚಿಂತನೆಯನ್ನು ವಿಫಲಗೊಳಿಸುವ ಅಗತ್ಯವಿದೆ’ ಎಂದು ಆರ್ಎಸ್ಎಸ್ ಹೇಳಿದೆ.

ಇಲ್ಲಿ ನಡೆದ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉನ್ನತಾಧಿಕಾರ ಸಮಿತಿಯಾದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಈ ಬಗ್ಗೆ ನಿರ್ಣಯವನ್ನು ಕೈಗೊಳ್ಳಲಾಗಿದೆ.

ವಿಶ್ವದ ಅನೇಕ ರಾಷ್ಟ್ರಗಳು ಭಾರತವನ್ನು ಗೌರವಿಸುತ್ತವೆ. ಕೆಲ ಶಕ್ತಿಗಳಿಗೆ, ಸ್ವಾವಲಂಬನೆ ಆಧರಿಸಿದ ಭಾರತೀಯತೆಯ ಪುನರುತ್ಥಾನ ಸಹಿಸಲಾಗುತ್ತಿಲ್ಲ. ಇಂಥ ಶಕ್ತಿಗಳೇ ದೇಶದ ಒಳಗೆ ಮತ್ತು ಹೊರಗಡೆ ಹಿಂದುತ್ವದ ಚಿಂತನೆಯನ್ನು ವಿರೋಧಿಸುತ್ತಿವೆ. ಸಮಾಜದಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿವೆ. ಇವುಗಳ ವಿರುದ್ಧ ಜಾಗೃತಿ ಅಗತ್ಯ ಎಂದು ಹೇಳಲಾಗಿದೆ.

ಭಾನುವಾರ ಆರಂಭವಾದ ವಾರ್ಷಿಕ ಸಭೆಯಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ ಭಾಗವತ್, ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹಾಗೂ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು. ವಿಎಚ್ಪಿ ಒಳಗೊಂಡು ಆರ್ಎಸ್ಎಸ್ ಜೊತೆಗೆ ಗುರುತಿಸಿಕೊಂಡ 34 ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆಯು ಮಂಗಳವಾರ ಅಂತ್ಯಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.