ಲಖನೌ: ‘ಉತ್ತರ ಪ್ರದೇಶ ಪೊಲೀಸ್ 112 ತುರ್ತು ಸೇವೆ‘ಯನ್ನು ಸುಧಾರಿಸುವ ಹಾಗೂ ಸೇವೆ ನೀಡಲು ತೆಗೆದುಕೊಳ್ಳುವ ಅವಧಿಯನ್ನು ಕಡಿಮೆ ಮಾಡಿ, ತ್ವರಿತಗತಿಯಲ್ಲಿ ಸೇವೆ ಲಭ್ಯವಾಗುವಂತೆ ಮಾಡಲು ಪೊಲೀಸ್ ಇಲಾಖೆಯಲ್ಲಿರುವ ಎಸ್‌ಯುವಿಯಂತಹ ದೊಡ್ಡ ಕಾರುಗಳನ್ನು ಬದಲಿಸಿ, ಆ ಜಾಗಕ್ಕೆ ಸಣ್ಣ ಕಾರುಗಳನ್ನು ಪೂರೈಸಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತುರ್ತು ಸೇವೆಗೆ ತ್ವರಿತಗತಿಯಲ್ಲಿ ಸ್ಪಂದಿಸಲು ಹಾಗೂ ಸಂಚಾರ ದಟ್ಟಣೆ ಪ್ರದೇಶದಲ್ಲಿ, ಕಿರಿದಾದ ಹಾದಿಗಳಲ್ಲಿ ವೇಗವಾಗಿ ಸಾಗಲು ಅನುಕೂಲ ಕಲ್ಪಿಸುವುದಕ್ಕಾಗಿ ಈಗಿರುವ ದೊಡ್ಡ ಕಾರುಗಳನ್ನು ಬದಲಿಸಲು ಚಿಂತಿಸಿರುವುದಾಗಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ತುರ್ತು ಸೇವೆ) ಅಸಿಮ್ ಅರುಣ್ ತಿಳಿಸಿದ್ದಾರೆ.

ಈಗಿರುವ ಎಸ್‌ಯುವಿ ವಾಹನಗಳ ಗಾತ್ರದ ಕಾರಣಕ್ಕೆ ಸಂಚಾರ ದಟ್ಟಣೆಯಲ್ಲಿ ಹೆಚ್ಚು ಸಮಯ ವ್ಯಯವಾಗುತ್ತಿದೆ. ಈ ವಾಹನಗಳಿಂದ ಟ್ರಾಫಿಕ್ ಜಾಮ್ ಕೂಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಕಾರುಗಳನ್ನು ಬದಲಾಯಿಸಲು ತೀರ್ಮಾನಿಸಲಾಗಿದೆ.

ಸದ್ಯ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ‘112 ತುರ್ತು ಸೇವೆ‘ (ಈ ಹಿಂದೆ 100 ಸರ್ವೀಸ್ ಇತ್ತು) ವಿಭಾಗದಲ್ಲಿ 4500 ವಾಹನಗಳಿವೆ. ಅದರಲ್ಲಿ 3 ಸಾವಿರದಷ್ಟು ಎಸ್‌ಯುವಿ ಕಾರುಗಳಿವೆ. ಉಳಿದಿದ್ದು ದ್ವಿಚಕ್ರವಾಹನಗಳು. ನಿತ್ಯ ರಾಜ್ಯದಾದ್ಯಂತ 15 ಸಾವಿರದಿಂದ 16 ಸಾವಿರದಷ್ಟು ತುರ್ತು ಘಟನೆಗಳಿಗೆ ಪ್ರತಿಕ್ರಿಯಿಸಲಾಗುತ್ತಿದೆ ಎಂದು ಅರುಣ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.