ನವದೆಹಲಿ:ಸ್ಟೈಸ್‌ಜೆಟ್ ಎಸ್‌ಜಿ–960 ವಿಮಾನದ ಲ್ಯಾಂಡಿಂಗ್ ವೇಳೆ ಪೈಲಟ್‌ಗಳು ವಿಮಾನದ ಎತ್ತರವನ್ನು ಅಂದಾಜಿಸುವಲ್ಲಿ ವಿಫರಾಗಿದ್ದು, ಸರಳ ಲ್ಯಾಂಡಿಂಗ್‌ಗೆ ಅಡಚಣೆಯಾಗಿದೆ. ಹೀಗಾಗಿ ರನ್‌ವೇ ಬಳಿ ಇದ್ದ ಮೂರು ದೀಪಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.

ಶನಿವಾರ ಬೆಂಗಳೂರಿನಿಂದ ಗುವಾಹಟಿಗೆ ಪ್ರಯಾಣ ಬೆಳೆಸಿದ್ದ ಈ ವಿಮಾಣದಲ್ಲಿ ಇಬ್ಬರು ಪೈಲಟ್‌ಗಳು, ನಾಲ್ವರು ಸಿಬ್ಬಂದಿ ಹಾಗೂ 155 ಪ್ರಯಾಣಿಕರಿದ್ದರು ಎನ್ನಲಾಗಿದೆ.

‘ಕಡಿಮೆ ಮೋಡವಿದ್ದ ಕಾರಣ ಪೈಲಟ್‌ಗಳು ವಿಮಾನದ ಎತ್ತರವನ್ನು ಗ್ರಹಿಸಲು ವಿಫಲರಾಗಿದ್ದರು. ಇದರಿಂದಾಗಿ ವಿಮಾನದ ಲ್ಯಾಂಡಿಂಗ್ ಕೊನೆಯ ಕ್ಷಣದವರೆಗೂ ಅನಿರೀಕ್ಷಿತವಾಗಿತ್ತು. ಇದು ಸರಳ ಲ್ಯಾಂಡಿಂಗ್ ಸಾಧ್ಯವಾಗದಿರಲು ಕಾರಣವಾಯಿತು. ವಿಮಾನವನ್ನು ರನ್‌ವೇ–2ರಲ್ಲಿ ಇಳಿಸಲಾಯಿತು‘ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ)ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತನಿಖೆಗೆ ಹಾಜರಾಗುವಂತೆ ಇಬ್ಬರೂ ಪೈಲಟ್‌ಗಳಿಗೆ ಡಿಜಿಸಿಎ ಸೂಚಿಸಿದೆ.

ವಿಮಾನವನ್ನು ಪಾರ್ಕಿಂಗ್‌ಗೆ ಸ್ಥಳಾಂತರಿಸಿದ ಬಳಿಕ ತಪಾಸಣೆ ನಡೆಸಲಾಗಿದ್ದು, ಟೈರ್‌ಗಳಿಗೆ ಹಾನಿಯಾಗಿರುವುದು ಕಂಡುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.