ನವದೆಹಲಿ: ವೀಸಾ ನಿರಾಕರಣೆಗೆ ಒಳಗಾದ ವುಶು ಮಹಿಳಾ ಸ್ಪರ್ಧಿ ಮೇಪುಂಗ್ ಲಮ್ಗು ಶುಕ್ರವಾರ ನಾಪತ್ತೆಯಾಗಿದ್ದು ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅರುಣಾಚಲ ಪ್ರದೇಶದಲ್ಲಿರುವ ಅವರ ಕುಟುಂಬ ಸದಸ್ಯರು ಆತಂಕಕ್ಕೆ ಒಳಗಾಗಿದ್ದಾರೆ.

ಹಾಂಗ್‌ಝೌ ಏಷ್ಯನ್ ಗೇಮ್ಸ್‌ಗೆ ಅರುಣಾಚಲ ಪ್ರದೇಶದ ಮೂವರು ಸ್ಪರ್ಧಿಗಳಿಗೆ ಚೀನಾ ವೀಸಾ ನಿರಾಕರಿ ಸಿದ್ದು ಅವರಲ್ಲಿ 20 ವರ್ಷದ ಲಮ್ಗು ಒಬ್ಬರು. ಗುರುವಾರ ವೀಸಾ ಸುದ್ದಿ ಗೊತ್ತಾಗುತ್ತಿದ್ದಂತೆ, ಅವರಿಗೆ ಸೋದರ ಗಾಂಧಿ ಲಮ್ಗು ಕರೆ ಮಾಡಿದ್ದಾಗ ಅವರು ಒಂದೇ ಸಮನೆ ಅಳುತ್ತಿದ್ದರು. ‘ಅವರು ನಮ್ಮ ಕರೆಗಳನ್ನು ತೆಗೆದುಕೊಳ್ಳುತ್ತಿಲ್ಲ. ಈಗ ಸ್ವಿಚ್ಡ್ ಆಫ್ ಸಂದೇಶ ಬರುತ್ತಿದೆ. ನಮಗೆ ತುಂಬಾ ಚಿಂತೆಯಾಗಿದೆ. ಆತುರದ ಕ್ರಮಕ್ಕೆ ಮುಂದಾಗಲಿಕ್ಕಿಲ್ಲ ಎಂಬ ಭರವಸೆಯಲ್ಲಿದ್ದೇವೆ’ ಎಂದು ಇಟಾನಗರದಲ್ಲಿ ವೈದ್ಯರಾಗಿರುವ ಗಾಂಧಿ ಪಿಟಿಐಗೆ ತಿಳಿಸಿದರು.

ಮೇಪುಂಗ್ ಪೋಷಕರು ಇಟಾ ನಗರದಿಂದ ದೂರದ ಸೆಪ್ಪಾದಲ್ಲಿ ನೆಲೆಸಿ ದ್ದಾರೆ. ಅಲ್ಲಿ ದೂರವಾಣಿ ಸೌಲಭ್ಯವೂ ಸರಿಯಾಗಿಲ್ಲ. ಅವರು ಕಂಗಾಲಾಗುತ್ತಾರೆ ಎನ್ನುವ ಕಾರಣ ಅವರಿಗೆ ವಿಷಯ ತಿಳಿಸಿಲ್ಲ ಎಂದು ಗಾಂಧಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.