ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

Maha Kumbh Stampede | ಪುಣ್ಯಸ್ನಾನಕ್ಕೆ ನೂಕುನುಗ್ಗಲು: 30 ಸಾವು

Published : 29 ಜನವರಿ 2025, 16:21 IST
Last Updated : 29 ಜನವರಿ 2025, 16:21 IST
ಫಾಲೋ ಮಾಡಿ
Comments
ನಾವು 60 ಜನ ಇಲ್ಲಿಗೆ ಬಂದಿದ್ದೇವೆ. ನಾನಿದ್ದ ಗುಂಪಿನಲ್ಲಿ 9 ಜನರಿದ್ದಾರೆ. ಹಠಾತ್ತನೇ ನಮ್ಮ ಗುಂಪಿನಲ್ಲಿ ನೂಕುನುಗ್ಗಲು ಶುರುವಾಯಿತು. ಇದರಿಂದ ನಾವು ಸಿಕ್ಕಿ ಹಾಕಿಕೊಂಡೆವು. ಎಲ್ಲ ದಿಕ್ಕುಗಳಿಂದಲೂ ನೂಕುತ್ತಿದ್ದರಿಂದ ನಮಗೆ ಆ ಜಾಗದಿಂದ ಪಾರಾಗಲು ಅವಕಾಶ ಇರಲಿಲ್ಲ. ನಮ್ಮಲ್ಲಿ ಅನೇಕರು ಕೆಳಗೆ ಬಿದ್ದರು. ಒಂದು ಹಂತದಲ್ಲಿ ಗುಂಪನ್ನು ನಿಯಂತ್ರಣ ಮಾಡುವುದು ಸಾಧ್ಯವಾಗಲಿಲ್ಲ.
–ಸರೋಜಿನಿ, ಕರ್ನಾಟಕದಿಂದ ತೆರಳಿರುವ ಭಕ್ತೆ
ವಿಪರೀತ ಭಕ್ತರು ಸೇರಿರುವ ಕಾರಣ ಸಂಗಮ ಘಾಟ್‌ನಲ್ಲಿ ನಡೆಯಬೇಕಿದ್ದ ಎಲ್ಲ ಅಖಾಡಗಳ ಸಾಂಪ್ರದಾಯಿಕ ಸ್ನಾನವನ್ನು ಮುಂದೂಡಲಾಗಿದೆ. ಕುಂಭ ಮೇಳ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇವೆ. ಜನದಟ್ಟಣೆ ಕಡಿಮೆಯಾದ ನಂತರ ನಾವು ಪುಣ್ಯಸ್ನಾನ ಮಾಡುತ್ತೇವೆ
–ಮಹಂತ ರವೀಂದ್ರ ಪುರಿ, ಅಖಿಲ ಭಾರತೀಯ ಅಖಾಡ ಪರಿಷದ್ ಅಧ್ಯಕ್ಷ
ಕನ್ನಡಿಗರ ಸಹಾಯಕ್ಕೆ ದೂರವಾಣಿ
ಪ್ರಯಾಗ್‌ರಾಜ್‌ನಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟ, ಗಾಯಗೊಂಡ ಕನ್ನಡಿಗರ ವಿವರ ಪಡೆಯಲು ಹಾಗೂ ಉತ್ತರ ಪ್ರದೇಶ ಸರ್ಕಾರದ ಜತೆ ಸಂವಹನ ನಡೆಸಲು ಐಎಎಸ್‌ ಅಧಿಕಾರಿ ಬೋಯರ್‌ ಹರ್ಷಲ್‌ ನಾರಾಯಣ್‌ರಾವ್‌ ಅವರನ್ನು ಕರ್ನಾಟಕ ಸರ್ಕಾರ ನೇಮಿಸಿದೆ. ಬೆಳಗಾವಿ ಜಿಲ್ಲಾಡಳಿತವು ಹೆಚ್ಚುವರಿ ಎಸ್‌ಪಿ ಶ್ರುತಿ, ವಿಶೇಷ ಜಿಲ್ಲಾಧಿಕಾರಿ ಹರ್ಷ ಶೆಟ್ಟಿ ಅವರನ್ನು ಪ್ರಯಾಗ್‌ರಾಜ್‌ಗೆ ಕಳುಹಿಸಿಕೊಟ್ಟಿದೆ.
ನ್ಯಾಯಾಂಗ ತನಿಖೆಗೆ ಆದೇಶಿಸಿದ ಯೋಗಿ
ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಬಗ್ಗೆ ನ್ಯಾಯಾಂಗ ತನಿಖೆಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬುಧವಾರ ಆದೇಶಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ರಾಜ್ಯ ಸರ್ಕಾರದಿಂದ ತಲಾ ₹25 ಲಕ್ಷ ಪರಿಹಾರವನ್ನೂ ಘೋಷಿಸಿದ್ದಾರೆ. ಮಹಾಕುಂಭ ಮೇಳದಲ್ಲಿ ಸಂಭವಿಸಿದ ದುರಂತದ ಕಾರಣಗಳ ಬಗ್ಗೆ ಮೂವರು ಸದಸ್ಯರ ಸಮಿತಿಯು ತನಿಖೆ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT