ಮುಂಬೈ: ಇದು ಭಾರತೀಯ ನೌಕಾಪಡೆಗೆ ಸ್ಮರಣೀಯ ದಿನ. ಅತ್ಯಾ ಧುನಿಕ ಸಮರನೌಕೆ ‘ಐಎನ್ಎಸ್ ನೀಲ ಗಿರಿ’ ಹಾಗೂ ಸ್ಕಾರ್ಪೀನ್ ಸರಣಿಯ ಜಲಾಂತರ್ಗಾಮಿ ‘ಐಎನ್ಎಸ್ ಖಾಂಡೇರಿ’ ನೌಕಾಪಡೆಯ ಸೇವೆಗೆ ಶನಿವಾರ ನಿಯೋಜನೆಗೊಂಡವು. ಅತಿ ದೊಡ್ಡ ಹಡಗುಜೆಟ್ಟಿಯನ್ನು ಉದ್ಘಾಟಿಸ ಲಾಯಿತು.

ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್, ಪತ್ನಿ ಸಾವಿತ್ರಿ ಸಿಂಗ್ ಹಾಗೂನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಮಬೀರ್ ಸಿಂಗ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

17–ಎ ಯೋಜನೆಯ ಮೊದಲ ಯುದ್ಧನೌಕೆ ‘ನೀಲಗಿರಿ’ಯು ಸಮು ದ್ರದಲ್ಲಿ ವಿವಿಧ ಪರೀಕ್ಷೆಗಳಿಗೆ ಒಳ ಪಡಲಿದೆ.ಸ್ವದೇಶಿ ವಿನ್ಯಾಸದಲ್ಲಿ ರೂಪು ಗೊಂಡಿರುವ ನೌಕೆ 2650 ಟನ್ ತೂಕವಿದೆ. ಸರ್ವೇಕ್ಷಣೆ, ಕಣ್ಗಾವಲು, ರಹಸ್ಯ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ರೇಡಾರ್, ಸೆನ್ಸರ್ಗಳನ್ನು ಅಳವಡಿಸಲಾಗಿದೆ.

ಡೀಸೆಲ್–ಎಲೆಕ್ಟ್ರಿಕ್ ಚಾಲಿತ ಜಲಾಂತರ್ಗಾಮಿ ‘ಐಎನ್ಎಸ್ ಖಾಂಡೇರಿ’ಯನ್ನು ಫ್ರಾನ್ಸ್ನ ನೌಕಾ ಮತ್ತು ಇಂಧನ ಸಂಸ್ಥೆ ಡಿಸಿಎನ್ಎಸ್ ವಿನ್ಯಾಸಗೊಳಿಸಿದ್ದು, ಮಜಗಾಂವ್ ಹಡಗುಕಟ್ಟೆಯಲ್ಲಿ ನಿರ್ಮಿಸಲಾಗಿದೆ. ನೌಕೆಯಲ್ಲಿರುವ ಟಾರ್ಪಡೋಗಳಿಂದ ನಿಖರವಾಗಿ ವೈರಿ ಪಡೆ ಮೇಲೆ ದಾಳಿ ಮಾಡಲು ಸಾಧ್ಯ.

ಹಿಂದುಸ್ತಾನ್ ಕನ್ಸ್ಟ್ರಕ್ಷನ್ ಕಂಪನಿ ಮುಂಬೈಯಲ್ಲಿ ನಿರ್ಮಿಸಿರುವ ಹಡಗುಜೆಟ್ಟಿಯು ದೇಶದಲ್ಲಿ ಅತಿದೊಡ್ಡದು. ಒಂದು ದಶಕದ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಐಎನ್ಎಸ್ ವಿಕ್ರಮಾ ದಿತ್ಯ ಗಾತ್ರದ ಎರಡು ಹಡಗುಗಳು ಏಕ ಕಾಲದಲ್ಲಿ ಇಲ್ಲಿ ಲಂಗರು ಹಾಕಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.