ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಪುರ ಲಿಟರೇಚರ್‌ ಫೆಸ್ಟಿವಲ್‌ | ಮಹಿಳೆಯರೇ ಹೆಚ್ಚು ಸಮರ್ಥರು; ಶ್ಲಾಘನೆ

ಜೈಪುರ ಲಿಟ್‌ ಫೆಸ್ಟಿವಲ್‌ನಲ್ಲಿ ಸುಧಾಮೂರ್ತಿ, ಪೆರುಮಾಳ್‌, ನೀಲಾಂಜನ ರಾಯ್‌
ರಾಜಲಕ್ಷ್ಮಿ ಕೋಡಿಬೆಟ್ಟು
Published 5 ಫೆಬ್ರುವರಿ 2024, 4:08 IST
Last Updated 5 ಫೆಬ್ರುವರಿ 2024, 4:08 IST
ಅಕ್ಷರ ಗಾತ್ರ

ಜೈಪುರ: ಜೈಪುರ ಲಿಟರೇಚರ್‌ ಫೆಸ್ಟಿವಲ್‌ ಭಾನುವಾರ ಮಳೆಯ ಆಗಮನದೊಂದಿಗೆ ಬಹಳ ಉತ್ಸಾಹದಿಂದ ಆರಂಭವಾಯಿತು. ಕಾರ್ಯಕ್ಷೇತ್ರದಲ್ಲಿ ಮಹಿಳೆಯ ಸಾಮರ್ಥ್ಯ ಅನಾವರಣದ ಕುರಿತು ಬಹುತೇಕ ಏಕರೂಪಿ ನಿಲುವುಗಳು ಮೂರು ಪ್ರಮುಖ ಗೋಷ್ಠಿಗಳಲ್ಲಿ ವ್ಯಕ್ತವಾದವು.

ಕನ್ನಡದ ಲೇಖಕಿ ಸುಧಾಮೂರ್ತಿ ಅವರ ಲವಲವಿಕೆಯ ಮಾತುಗಳನ್ನು ಕೇಳಲು ಸಭಾಂಗಣ ಕಿಕ್ಕಿರಿದು ತುಂಬಿತ್ತು. ‘ಪುರುಷರು ಯಾವಾಗಲೂ ತಾವೇ ಮೇಲೆ ಎಂದ ಭಾವಿಸುತ್ತಾರೆ ಮತ್ತು ಮಹಿಳೆಯರು ಅದನ್ನು ಒಪ್ಪಿದಂತೆ ನಟಿಸುತ್ತಾರೆ. ವಾಸ್ತವವಾಗಿ ಅವರಿಗಿಂತ ಹೆಚ್ಚಿನ ಶಕ್ತಿ ಸಾಮರ್ಥ್ಯವನ್ನು ಮಹಿಳೆಯರು ಹೊಂದಿದ್ದಾರೆ.  ಹೆರುವ ನೋವು ಅನುಭವಿಸಿ, ತವರಿನಲ್ಲಿಯೂ ಗಂಡ ಮನೆಯಲ್ಲಿಯೂ ಸಂಬಂಧಗಳನ್ನು ನಾಜೂಕಾಗಿ ನಿಭಾಯಿಸುತ್ತ ಜೀವನ ಸಾಗಿಸುತ್ತಾರೆ. ಅವರು ನಿಜಕ್ಕೂ ಉತ್ತಮ ಸಂವಹನ ಕಾರರಾಗಿರುತ್ತಾರೆ. ಆದ್ದರಿಂದ, ಮಹಿಳೆಯರು ತಮ್ಮೊಳಗಿರುವ ಸಾಮರ್ಥ್ಯ ವನ್ನು ಪ್ರಕಟಪಡಿಸಲು ಯಾವತ್ತೂ ಹಿಂಜರಿಯಬಾರದು‘ ಎಂದರು.  ಅವರು ಹೇಳಿದ ಕಿವಿ ಮಾತುಗಳಿಗೆ ಪುರುಷ ಮಹಿಳೆಯರ ಭೇದವಿಲ್ಲದೆ ಚಪ್ಪಾಳೆಯ ಸುರಿಮಳೆ. ನನ್ನ ಪುಸ್ತಕದಲ್ಲಿಯೂ  ತಾವು ಸಾಮಾನ್ಯರೆಂದು ಬಗೆದು ತಮ್ಮ ಬದುಕನ್ನು ಸವೆಸಿದ ಅನೇಕ ಮಹಿಳೆಯರ ಕಥೆಗಳೇ ನನ್ನ ಪುಸ್ತಕದಲ್ಲಿಯೂ ಇದೆ.  ಅವರಿಗೆ ಪ್ರಶಸ್ತಿ ಫಲಕಗಳು ಬಂದಿಲ್ಲ. ಆದರೆ ಅವರ ಬದುಕು ಅನುಭವ ಶ್ರೀಮಂತವಾದುದು. ಅಂತಹ ಮಹಿಳಾ ರತ್ನಗಳ ಕಥೆಯನ್ನು ಪೋಣಿಸುವ ದಾರವಷ್ಟೇ ನಾನಾಗಿದ್ದೇನೆ.

‘ನೀವು ಯಾವ ಪ್ರಶ್ನೆಯನ್ನಾದರೂ ಕೇಳಿ, ಅಳಿಯ ಮತ್ತು ರಾಜಕೀಯದ ವಿಚಾರವನ್ನು ಪ್ರಶ್ನೋತ್ತರದಿಂದ ಹೊರಗಿಟ್ಟಬಿಡಿ’ ಎಂದು ಲಕ್ಷ್ಮಣ ರೇಖೆ ಎಳೆದರು.

ಮದುವೆ ಸೇರಿದಂತೆ ಎಲ್ಲ ಸಂಬಂಧಗಳ ಮುಖ್ಯ ಸೂತ್ರ ತಾಳ್ಮೆ. ಗಂಡ ಮತ್ತು ಹೆಂಡತಿಯ ವ್ಯಕ್ತಿತ್ವಗಳು ಬೇರೆ ಬೇರೆಯೇ ಆಗಿರುತ್ತದೆ. ಅದನ್ನು ಪರಸ್ಪರರು ಗೌರವಿಸಿಕೊಳ್ಳಬೇಕು. ಇವರಂತೆ ಅವರಾಗಬೇಕು, ಅವರಂತೆ ಇವರಾಗಬೇಕು ಎಂಬ ನಿರೀಕ್ಷೆಯಿದ್ದಾಗ ಜಗಳ ಸೃಷ್ಟಿಯಾಗುತ್ತದೆ ಎಂದು ಹೇಳಿದರು. 

ಅಮ್ಮನೇ ಸ್ಫೂರ್ತಿ

ಪ್ರಸಿದ್ಧ ಕಾದಂಬರಿಕಾರ ಪೆರುಮಾಳ್‌ ಮುರುಗನ್‌ ಅವರ ಗೋಷ್ಠಿಯಲ್ಲಿ, ‘ತಮ್ಮ ಕಾದಂಬರಿಯಲ್ಲಿ ಗಟ್ಟಿಗಿತ್ತಿ ಮಹಿಳೆಯರ ಪಾತ್ರಗಳು ಕಾಣಿಸಿಕೊಂಡಿದ್ದರೆ ಅದಕ್ಕೆ ಕಾರಣ ನನ್ನ ಅಮ್ಮ. ಕೃಷಿ ಕುಟುಂಬದಲ್ಲಿ ಮಹಿಳೆಯೇ ಕೇಂದ್ರ ಬಿಂದು ವಾಗಿರುತ್ತಾಳೆ. ಅಡುಗೆ ಮತ್ತು ಕೃಷಿ ಕೆಲಸಗಳನ್ನು ಸುಲಲಿತವಾಗಿ ನಿರ್ವಹಿಸುತ್ತಿದ್ದ ಅಮ್ಮನ ಸಾಮರ್ಥ್ಯವನ್ನು ನಾನು ಅಚ್ಚರಿಯಿಂದ ಗಮನಿಸುತ್ತಿದ್ದೆ. ಕೃಷಿಕರ ಮನೆಯಲ್ಲಿ ಮಹಿಳೆ ಅಡುಗೆ ಮನೆಗೆ ಸೀಮಿತವಾಗಿರಲಿಲ್ಲ. ಆಕೆ ಅಡುಗೆಯನ್ನೂ, ಮನೆಯ ಆರ್ಥಿಕ ವ್ಯವಹಾರವನ್ನೂ ನೋಡಿಕೊಳ್ಳುತ್ತಿದ್ದ ನಾಯಕಿಯಾಗಿದ್ದಳು. ಆದರೆ ಈ ನೆಮ್ಮದಿಯ ಜೀವನ ಶೈಲಿಗೆ ವಲಸೆ ಎಂಬುದು ಕಂಟಕವಾಗಿ ಎದುರಾಯಿತು. ವಲಸೆ ನನ್ನನ್ನು ಬಹುವಾಗಿ ಕಾಡಿದ ವಿಷಯ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT